Tuesday, September 29, 2026

BDA Apartments

ಎಲ್ಲಾ ಸ್ಟಾರ್ ನಟರು ಬಿಜೆಪಿ ಪರ ಪ್ರಚಾರಕ್ಕೆ ಬಂದರೆ ಸ್ವಾಗತ- ಸಚಿವ ಡಾ.ಕೆ.ಸುಧ...
Home Front Page ಎಲ್ಲಾ ಸ್ಟಾರ್ ನಟರು ಬಿಜೆಪಿ ಪರ ಪ್ರಚಾರಕ್ಕೆ ಬಂದರೆ ಸ್ವಾಗತ- ಸಚಿವ ಡಾ.ಕೆ.ಸುಧಾಕರ್.

ಎಲ್ಲಾ ಸ್ಟಾರ್ ನಟರು ಬಿಜೆಪಿ ಪರ ಪ್ರಚಾರಕ್ಕೆ ಬಂದರೆ ಸ್ವಾಗತ- ಸಚಿವ ಡಾ.ಕೆ.ಸುಧಾಕರ್.

ಬೆಂಗಳೂರು,ಏಪ್ರಿಲ್,6,2023(www.justkannada.in): ರಾಜ್ಯ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೆ ಬಿಜೆಪಿಯು ಪ್ರಚಾರಕ್ಕೆ ಸ್ಟಾರ್ ನಟರ  ಮೊರೆ ಹೋಗಿದ್ದು , ಈ ನಡುವೆ ಎಲ್ಲಾ ಸ್ಟಾರ್ ನಟರು ಬಿಜೆಪಿ ಪರ ಪ್ರಚಾರಕ್ಕೆ ಬಂದರೆ ಸ್ವಾಗತ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.

ನಟ ಕಿಚ್ಚ ಸುದೀಪ್ ಈಗಾಗಲೇ ಸಿಎಂ ಬಸವರಾಜ ಬೊಮ್ಮಾಯಿ ಪರ ಪ್ರಚಾರ ಮಾಡುವುದಾಗಿ ಹೇಳಿದ್ದಾರೆ. ಅಲ್ಲದೆ ಬೊಮ್ಮಾಯಿ ಅವರು ಹೇಳಿದ ಕಡೆಗಳಲ್ಲಿಯೂ ಪ್ರಚಾರ ಮಾಡುವುದಾಗಿ ತಿಳಿಸಿದ್ದಾರೆ. ಈ ಕುರಿತು ಮಾತನಾಡಿರುವ ಸಚಿವ ಸುಧಾಕರ್, ನಟ  ಸುದೀಪ್  ಬಿಜೆಪಿ ಸ್ಟಾರ್ ಪ್ರಚಾರಕ ಪಕ್ಷದ ಸ್ಟಾರ್ ಕ್ಯಾಂಪೇನರ್ ಆಗಿಯೇ ಪ್ರಚಾರ ಮಾಡುತ್ತಾರೆ.  ಈಗಾಗಲೇ ಸಿಎಂ ಬೊಮ್ಮಾಯಿ ಅವರಿಗೆ ಬೆಂಬಲ ಘೋಷಣೆ ಮಾಡಿದ್ದಾರೆ. ಸುದೀಪ್ ಎಲ್ಲೆಲ್ಲಿ ಪ್ರಚಾರ ಮಾಡ್ತಾರೆಂದು ಶ್ರೀಘ್ರವೇ ತೀರ್ಮಾನ ಮಾಡಲಾಗತ್ತದೆ ಎಂದರು.ಎಲ್ಲಾ ಸ್ಟಾರ್ ನಟರು ಬಿಜೆಪಿ ಪರ ಪ್ರಚಾರಕ್ಕೆ ಬಂದರೆ ಸ್ವಾಗತ sudhakar

Key words: All star -actors – welcome – campaign – BJP – Minister -Dr. K. Sudhakar.