Tuesday, September 29, 2026

BDA Apartments

Home Front Page ಕಾಂಗ್ರೆಸ್ ಟಿಕೆಟ್ ಘೋಷಣೆ ಬೆನ್ನಲ್ಲೆ ಚಿತ್ರದುರ್ಗದಲ್ಲಿ ಭಿನ್ನಮತ: ಬಂಡಾಯ ಸ್ಪರ್ಧೆಗೆ ಮುಂದಾದ ರಘು ಆಚಾರ್.

ಕಾಂಗ್ರೆಸ್ ಟಿಕೆಟ್ ಘೋಷಣೆ ಬೆನ್ನಲ್ಲೆ ಚಿತ್ರದುರ್ಗದಲ್ಲಿ ಭಿನ್ನಮತ: ಬಂಡಾಯ ಸ್ಪರ್ಧೆಗೆ ಮುಂದಾದ ರಘು ಆಚಾರ್.

ಚಿತ್ರದುರ್ಗ,ಏಪ್ರಿಲ್,6,2023(www.justkannada.in):  ರಾಜ್ಯ ವಿಧಾನಸಭಾ ಚುನಾವಣಾ ಕಣ ರಂಗೇರಿದ್ದು  ಇಂದು ಕಾಂಗ್ರೆಸ್ ತನ್ನ ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆ ಮಾಡಿದೆ. ಈ ಬೆನ್ನಲ್ಲೆ ಚಿತ್ರದುರ್ಗದಲ್ಲಿ ಭಿನ್ನಮತ ಸ್ಪೋಟವಾಗಿದೆ.

ಚಿತ್ರದುರ್ಗದಿಂದ  ವೀರೇಂದ್ರ ಪಪ್ಪಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ. ಆದರೆ ತಮಗೆ ಟಿಕೆಟ್ ಕೈತಪ್ಪಿದ ಹಿನ್ನೆಲ ರಘು ಆಚಾರ್ ಕಾಂಗ್ರೆಸ್ ವಿರುದ್ದ ಬಂಡಾಯ ಸಾರಿದ್ದಾರೆ.ಕಾಂಗ್ರೆಸ್ ಟಿಕೆಟ್ ಘೋಷಣೆ ಬೆನ್ನಲ್ಲೆ ಚಿತ್ರದುರ್ಗದಲ್ಲಿ ಭಿನ್ನಮತ raghu achar

ಈ ಕುರಿತು ಮಾತನಾಡಿರುವ ರಘು ಆಚಾರ್, ಕಾಂಗ್ರೆಸ್ಸಿಗರು ಅರ್ಧದಾರಿಯಲ್ಲೇ ಕತ್ತು ಕೊಯ್ದಿದ್ದಾರೆ.  ಸಿದ್ಧರಾಮಯ್ಯ ಅವರೇ ನನಗೆ ಸ್ಪರ್ಧಿಸುವಂತೆ ಹೇಳಿದ್ದರು. ಎಂಎಲ್ ಸಿ ಬೇಡ  ಎಂಎಲ್ ಎಗೆ ಸ್ಪರ್ಧಿಸಿ ಎಂದಿದ್ದರು. ಆದರೆ ನನಗೆ ಮೋಸ ಮಾಡಿದ್ರು ನಾಣು ಚುನಾವಣೆಯಲ್ಲಿ ಸ್ಪರ್ಧೆ ಮಾಡೋದು ಸತ್ಯ ಏಪ್ರಿಲ್  17ಕ್ಕೆ ನಾನು ನಾಮಪತ್ರ ಸಲ್ಲಿಸುತ್ತೇನೆ ಎಂದು ರಘು ಆಚಾರ್ ಹೇಳಿದ್ದಾರೆ.

Key words: Chitradurga – Congress –ticket-Raghu Achar – rebel -contest.