ವಲಸಿಗರಿಗೆ ಮಣೆ ಹಾಕಿದ ಕಾಂಗ್ರೆಸ್. P.G.R. ಸಿಂಧ್ಯಾಗೆ ಟಿಕೆಟ್ ನಿರಾಕರಣೆ

 

ಬೆಂಗಳೂರು, ಏ.06, 2023 : (www.justkannada.in news ) ಅಳೆದು, ಸುರಿದು ಕಾಂಗ್ರೆಸ್ ತನ್ನ ಎರಡನೆ ಪಟ್ಟಿಯಲ್ಲಿ ನಲವತ್ತೆರಡು ಅಭ್ಯರ್ಥಿಗಳ ಹೆಸರುಗಳನ್ನು ಅಂತಿಮಗೊಳಿಸಿ ಇಂದು ಬಿಡುಗಡೆ ಮಾಡಿದೆ.  ಇದುವರೆವಿಗೂ ಪಕ್ಷ 166  ಕ್ಷೇತ್ರದಲ್ಲಿ ಸ್ಪರ್ಧಿಸುವ ಹುರಿಯಾಳುಗಳನ್ನು ಘೋಷಿಸಿದೆ. ಇನ್ನೂ 58 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಆಯ್ಕೆ ಮಾಡಬೇಕಿದೆ.

ಶತಯಾ ಗತಾಯ ಬಿಜೆಪಿಯನ್ನು ಸೋಲಿಸಿ ಕರ್ನಾಟಕದಲ್ಲಿ ಮತ್ತೆ ಕಾಂಗ್ರೆಸ್‌ ಬಾವುಟ ಹಾರಿಸಬೇಕೆಂಬ ಹಠ ತೊಟ್ಟಿರುವ ಪಕ್ಷದ ನಾಯಕರು, ಎರಡನೇ ಪಟ್ಟಿಯಲ್ಲಿ ಕೆಲವು ವಲಸಿಗರಿಗೆ ಮಣೆ ಹಾಕಿದ್ದಾರೆ. ಹೇಳಿಕೊಳ್ಳುವ ಅಚ್ಚರಿಯ ಆಯ್ಕೆಯನ್ನೇನು ಮಾಡಿದಂತಿಲ್ಲಾ.

ಮುಖ್ಯ ಮಂತ್ರಿ ಬಸವರಾಜ್ ಬೊಮ್ಮಾಯಿ ವಿರುಧ್ದ ಶಿಗ್ಗಾವಿಯಲ್ಲಿ ಪ್ರಬಲ ಪಂಚಮಸಾಲಿ ನಾಯಕ ವಿನಯ್ ಕುಲಕರ್ಣಿ ಯನ್ನು ಕಣಕ್ಕಿಳಿಸುವುದಾಗಿ ಸುದ್ದಿ ಮಾಡಿದ್ದ ಕಾಂಗ್ರೆಸ್, ಆ ಸಾಹಸಕ್ಲೆ ಗುಡ್‌ ಬೈ ಹೇಳಿದೆ. ವಿನಯ್ ಕುಲಕರ್ಣಿ ಗೆ ದಾರವಾಡದಲ್ಲಿ ಸ್ಪರ್ದಿಸಲು  ಅವರ ಹೆಸರನ್ನು ಅಂತಿಮವಾಗಿ ಘೋಷಣೆ ಮಾಡಿದೆ.

ಸಿದ್ದರಾಮಯ್ಯನವರು ಪ್ರತಿನಿಧಿಸುತ್ತಿದ್ದ ಬಾದಾಮಿ ಕ್ಷೇತ್ರ ಮತ್ತೆ ಬಿ ಬಿ ಚಿಮ್ಮಣಕಟ್ಟಿ  ಪಾಲಾಗಿದೆ. ಯಾವುದೇ ಕಾರಣಕ್ಕೆ ತಮ್ಮ ಕ್ಷೇತ್ರವನ್ನು ಸಿದ್ದರಾಮಯ್ಯನವರಿಗೆ ಬಿಡೆನು ಎಂದು ಹಠಕ್ಕೆ ಬಿದ್ದದ್ದ ಚಿಮ್ಮಣಕಟ್ಟಿ, ಕ್ಷೇತ್ರ ಉಳಿಸಿಕೊಳ್ಳುವಲ್ಲಿ ಸಫಲರಾಗಿದ್ದಾರೆ. ಆದರೆ ಬಾದಾಮಿಯಲ್ಲಿ ಗೆಲುವು ಅಷ್ಟ ಸುಲಭವಲ್ಕಾ ಎಂಬುದು ಸ್ಥಳೀಯರ ಅಭಿಪ್ರಾಯ.

ಎರಡನೇ ಪಟ್ಟಿಯಲ್ಲೂ ಬಹುತೇಕ ಹಳೆಯ ಮುಖಗಳೇ ರಾರಾಜಿಸಿವೆ. ವಲಸಿಗರಾದ ಎನ್ ವೈ ಗೋಪಾಲಕೃಷ್ಣ ( ಮೊಳಕಾಲ್ಮೂರು)  ಜೆಡಿಎಸ್ ನಾಯಕರ ವಿರುದ್ಧ ತೊಡೆ ತಟ್ಟಿ ಹೊರ ಬಂದ ಗುಬ್ಬಿ ಯ ಶ್ರೀನಿವಾಸ ಗೆ ಟಿಕೇಟ್ ನೀಡಲಾಗಿದೆ.

ಬೆಂಗಳೂರು ನಗರದ ಪದ್ಮನಾಭ ನಗರ ಕ್ಷೇತ್ರದಲ್ಲಿ ಪಿ ಜಿ ಆರ್ ಸಿಂಧ್ಯಾ ಸ್ಪರ್ಧಿಸುತಾರೆ ಎಂದು ಹರಿ ಬಿಡಲಾಗಿತ್ತು. ಆದರೆ ಈಗ ವಿ ರಘುನಾಥ್ ನಾಯ್ಡು ರವರಿಗೆ ಟಿಕೇಟ್ ಘೋಷಣೆ ಯಾಗಿದೆ. ಬಿಜೆಪಿಯ ಆರ್ ಆಶೋಕ್ ಈ ಕ್ಷೇತ್ರದಲ್ಲಿ ಅಧಿಪತ್ಯ ಸ್ಥಾಪಿಸಿ ದ್ದಾರೆ. ಸಿದ್ದರಾಮಯ್ಯನವರ ಆಪ್ತ ಎಂದೇ ಬಿಂಬಿತರಾಗಿದ್ಸ ವೈ ಎಸ್ ವಿ ದತ್ತಾ ರವರಿಗೆ ಕಡೂರಿನ ಟಿಕೇಟ್ ನಿರಾಕರಿಸಲಾಗಿದೆ.

ಬಿಜೆಪಿ ತ್ಯಜಿಸಿ ಕಾಂಗ್ರೆಸ್ ಗೆ ಮರಳಿದ ಬಾಬುರಾವ್ ಚಿಂಚನಸೂರ್ ರವರಿಗೆ ,  ಗುರುಮಠ್ಕಲ್ ಕ್ಷೇತ್ರದಲ್ಲಿ ಸ್ಪರ್ದಿಸಲು ಹಸಿರು ನಿಶಾನೆ ತೋರಿದೆ ಕಾಂಗ್ರೆಸ್. ಮಾಜಿ ರಾಜ್ಯಪಾಲ ಬಿ ರಾಚಯ್ಯನವರ ಪುತ್ರ ಎ. ಆರ್. ಕೃಷ್ಣ ಮೂರ್ತಿ ಅವರಿಗೆ ಕೊಳ್ಳೇಗಾಲ ಮೀಸಲು ಕ್ಷೇತ್ರದಲ್ಲಿ ಸ್ಪರ್ದಿಸಲು ಕಾಂಗ್ರೆಸ್ ಹೈಕಮಾಂಡ್  ಟಿಕೇಟ್ ನೀಡಿದೆ.

key words : karnataka-election-2023-congress-second-list