Tuesday, August 18, 2026

BDA Apartments

Home Cinema ನಮ್ಮ ಕಿಚ್ಚ ಮಾರಿಕೊಳ್ಳುವವರಲ್ಲ: ನಟ ಸುದೀಪ್ ಬಿಜೆಪಿ ಸೇರ್ಪಡೆ ವಿಚಾರ ಕುರಿತು ಪ್ರಕಾಶ್ ರೈ ಟ್ವೀಟ್.

ನಮ್ಮ ಕಿಚ್ಚ ಮಾರಿಕೊಳ್ಳುವವರಲ್ಲ: ನಟ ಸುದೀಪ್ ಬಿಜೆಪಿ ಸೇರ್ಪಡೆ ವಿಚಾರ ಕುರಿತು ಪ್ರಕಾಶ್ ರೈ ಟ್ವೀಟ್.

ಬೆಂಗಳೂರು,ಏಪ್ರಿಲ್,5,2023(www.justkannada.in): ನಟ ಕಿಚ್ಚ ಸುದೀಪ್ ಅವರು ಬಿಜೆಪಿ ಸೇರ್ಪಡೆ ವಿಚಾರ ಕುರಿತು ಟ್ವೀಟ್ ಮಾಡಿ ಪ್ರತಿಕ್ರಿಯಿಸಿರುವ ನಟ ಪ್ರಕಾಶ್ ರಾಜ್, ನಮ್ಮ ಕಿಚ್ಚ ಮಾರಿಕೊಳ್ಳುವವರಲ್ಲ ಎಂದು ಬಿಜೆಪಿಗೆ ಟಾಂಗ್ ನೀಡಿದ್ದಾರೆ.

ನಟ ಸುದೀಪ್ ಅವರು ಬಿಜೆಪಿ ಸೇರುತ್ತಾರೆ ಅಥವಾ ಬಿಜೆಪಿ ಪರ ಪ್ರಚಾರ ಮಾಡುತ್ತಾರೆ, ಎಂಬ ಸುದ್ದಿ ಹರಿದಾಡುತ್ತಿದೆ. ಈ ಕುರಿತು ಟ್ವೀಟ್ ಮಾಡಿರುವ ನಟ ಪ್ರಕಾಶ್ ರೈ, ‘ಕರ್ನಾಟಕದಲ್ಲಿ ಹತಾಶರಾದ, ಸೋತ ಬಿಜೆಪಿಯಿಂದ ಹರಡಿದ ಸುಳ್ಳು ಸುದ್ದಿ ಇದು ಎಂದು ನಾನು ಬಲವಾಗಿ ನಂಬುತ್ತೇನೆ. ಕಿಚ್ಚ ಸುದೀಪ್ ಪ್ರಜ್ಞಾವಂತ.  ಬಿಜೆಪಿ ಸೋಲುವ ಭಯದಲ್ಲಿ ಹರಡುತ್ತಿರುವ ಸುಳ್ಳು ಸುದ್ದಿ ಇದು. ನಮ್ಮ ಕಿಚ್ಚ ಮಾರಿಕೊಳ್ಳುವವರಲ್ಲ ಎಂದು ಬಿಜೆಪಿಗೆ ಕುಟುಕಿದ್ದಾರೆ.

ಇಂದು  ಮಧ್ಯಾಹ್ನ ಸಿಎಂ ಬಸವರಾಜ ಬೊಮ್ಮಾಯಿ ಅವರು ಸುದ್ದಿಗೋಷ್ಠಿ  ನಡೆಸಲಿದ್ದು ನಟ ಸುದೀಪ್ ಅವರ ನಡೆ ಏನು ಎಂಬುದು ಗೊತ್ತಾಗಲಿದೆ.

Key words: Prakash Rai- tweets -about –actor- Sudeep- joining -BJP.