Tuesday, September 22, 2026

BDA Apartments

Home Front Page ಕಾಂಗ್ರೆಸ್ ಗೆ ಸೋಲಿನ ಭೀತಿ ಶುರು: ಬ್ಲ್ಯಾಕ್ ಮನಿ ಹೊರಗೆ ಬರುತ್ತೆ ಅನ್ನೋ ಭಯ- ಸಿಎಂ...

ಕಾಂಗ್ರೆಸ್ ಗೆ ಸೋಲಿನ ಭೀತಿ ಶುರು: ಬ್ಲ್ಯಾಕ್ ಮನಿ ಹೊರಗೆ ಬರುತ್ತೆ ಅನ್ನೋ ಭಯ- ಸಿಎಂ ಬಸವರಾಜ ಬೊಮ್ಮಾಯಿ ಟೀಕೆ.

ಬೆಂಗಳೂರು,ಏಪ್ರಿಲ್,5,2023(www.justkannada.in):  ಬಿಜೆಪಿ ಸರ್ಕಾರ ಇಡಿ ಮತ್ತು ಐಟಿಯನ್ನ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿದ ಕಾಂಗ್ರೆಸ್ ಗೆ ಸಿಎಂ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ.

 ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಐಟಿ ಅಧಿಕಾರಿಗಳು ಪ್ರತಿ ಜಿಲ್ಲೆಯಲ್ಲೂ ಇದ್ದಾರೆ. ಕಾಂಗ್ರೆಸ್ ನಾಯಕರಿಗೆ ಭಯ ಶುರುವಾಗಿದೆ  ಬ್ಲ್ಯಾಕ್ ಮನಿ ಹೊರಗೆ ಬರುತ್ತೆ ಅನ್ನೋ ಭಯವಿದೆ.  ಕಾಂಗ್ರೆಸ್ ಆಟ ನಡೆಯಲ್ಲ. ಕಾಂಗ್ರೆಸ್ ನಾಯಕರು ಯಾಕೆ ಭಯ ಪಡಬೇಕು.  ಯಾರು ಕಳ್ಳರಿದ್ದಾರೋ ಅವರು ಸಿಕ್ಕಿಬೀಳುತ್ತಾರೆ. ಕಾಂಗ್ರೆಸ್ ಗೆ ಈಗ ಸೋಲಿನ ಭೀತಿ ಶುರುವಾಗಿದೆ ಎಂದು ಟಾಂಗ್ ನೀಡಿದರು.ಕಾಂಗ್ರೆಸ್ ಗೆ ಸೋಲಿನ ಭೀತಿ ಶುರು cm bommai cm bommai 5

ನಟ ಕಿಚ್ಚ ಸುದೀಪ್ ಬಿಜೆಪಿ ಸೇರ್ಪಡೆ ಕುರಿತು ಗುಟ್ಟು ಬಿಟ್ಟುಕೊಡದ ಸಿಎಂ ಬಸವರಾಜ ಬೊಮ್ಮಾಯಿ, ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತೇನೆ ಎಂದರು.

Key words: fear -defeat – Congress –CM- Basavaraja Bommai.