Sunday, September 20, 2026

BDA Apartments

Home Front Page ಅಧಿಕಾರ, ಹುದ್ದೆಗಾಗಿ ಕಾಂಗ್ರೆಸ್ ಹೋರಾಟ: ಇಲ್ಲದ ಸೀಟಿಗಾಗಿ ಡಿಕೆಶಿ, ಸಿದ್ಧರಾಮಯ್ಯ ಗುದ್ದಾಡುತ್ತಿದ್ದಾರೆ-ಸಿಎಂ ಬೊಮ್ಮಾಯಿ ಟಾಂಗ್.

ಅಧಿಕಾರ, ಹುದ್ದೆಗಾಗಿ ಕಾಂಗ್ರೆಸ್ ಹೋರಾಟ: ಇಲ್ಲದ ಸೀಟಿಗಾಗಿ ಡಿಕೆಶಿ, ಸಿದ್ಧರಾಮಯ್ಯ ಗುದ್ದಾಡುತ್ತಿದ್ದಾರೆ-ಸಿಎಂ ಬೊಮ್ಮಾಯಿ ಟಾಂಗ್.

ಬೆಂಗಳೂರು,ಏಪ್ರಿಲ್,4,2023(www.justkannada.in): ಕಾಂಗ್ರೆಸ್ ನಲ್ಲಿ ಸಿಎಂ ಹುದ್ದೆಗೆ ಡಿ.ಕೆ ಶಿವಕುಮಾರ್ ಮತ್ತು ಮಾಜಿ ಸಿಎಂ ಸಿದ್ಧರಾಮಯ್ಯ ನಡುವಿನ ಪೈಪೋಟಿ ಕುರಿತು ಸಿಎಂ ಬಸವರಾಜ ಬೊಮ್ಮಾಯಿ ವ್ಯಂಗ್ಯವಾಡಿದ್ದಾರೆ.

ಈ ಕುರಿತು ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಕಾಂಗ್ರೆಸ್ ಅಧಿಕಾರ, ಹುದ್ದೆಗಾಗಿ ಹೋರಾಟ ಮಾಡುತ್ತಿದೆ.  ಸಿಎಂ ಕುರ್ಚಿಗಾಗಿ ಡಿಕೆ ಶಿವಕುಮಾರ್ ಸಿದ್ದರಾಮಯ್ಯ ಹೊಡೆದಾಡುತ್ತಿದ್ದಾರೆ. ಡಿಕೆ ಶಿವಕುಮಾರ್,  ಸಿದ‍್ಧರಾಮಯ್ಯ ಇಲ್ಲದ ಸೀಟಿಗಾಗಿ ಗುದ್ದಾಡುತ್ತಿದ್ದಾರೆ. ಜನರಿಗೆ ಒಳ್ಳೆಯದನ್ನ ಮಾಡಲು ಹೋರಾಟ ಮಾಡುತ್ತಿಲ್ಲ. ಜನರ ಮನಸ್ಸಿನಲ್ಲಿ ಇವರಿಬ್ಬರೂ ಇಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ ಎಂದು ಡಿಕೆಶಿಗೂ ಗೊತ್ತಿದೆ . ಆದರೂ ಜನರನ್ನ ಮರಳು ಮಾಡಲು ಯತ್ನಿಸುತ್ತಿದ್ದಾರೆ ಎಂದು ಕಿಡಿಕಾರಿದರು.ಅಧಿಕಾರ cm bommai cm bommai 4

ಟಿಕೆಟ್ ಹಂಚಿಕೆ ವಿಚಾರವಾಗಿ 2 ದಿನ ಜಿಲ್ಲಾ ಸಮಿತಿ ಸಭೆಯಾಗಿದೆ ಈ ಬಾರಿ ಅಚ್ಚರಿ ಅಭ್ಯರ್ಥಿಗಳನ್ನ ಕಣಕ್ಕಿಳಿಸುವುದು ಗ್ಯಾರಂಟಿ.  ಮೂರ್ನಾಲ್ಕು ತಿಂಗಳ ಬೆಳವಣಿಗೆ ಗಮನಿಸಿದರೇ ನಮ್ಮ ಪಕ್ಷಕ್ಕೆ ಬಹುಮತ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Key words: Congress – power – position-CM Bommai -Tong.