Thursday, August 13, 2026

BDA Apartments

Home Front Page ದುರ್ಗಾಷ್ಟಮಿ ಪುಣ್ಯ ದಿನದಂದು ಎಲೆಕ್ಷನ್ ಘೋಷಣೆ: ಕಾಂಗ್ರೆಸ್‌ ಭರವಸೆಗಳನ್ನು ಜಾರಿಗೆ ತರೋಣ- ರಣದೀಪ್ ಸಿಂಗ್ ಸುರ್ಜೇವಾಲ.

ದುರ್ಗಾಷ್ಟಮಿ ಪುಣ್ಯ ದಿನದಂದು ಎಲೆಕ್ಷನ್ ಘೋಷಣೆ: ಕಾಂಗ್ರೆಸ್‌ ಭರವಸೆಗಳನ್ನು ಜಾರಿಗೆ ತರೋಣ- ರಣದೀಪ್ ಸಿಂಗ್ ಸುರ್ಜೇವಾಲ.

ಬೆಂಗಳೂರು,ಮಾರ್ಚ್,29,2023(www.justkannada.in):  ರಾಜ್ಯ ವಿಧಾನಸಭಾ ಚುನಾವಣೆಗೆ ದಿನಾಂಕ ನಿಗದಿಯಾಗಿದ್ದು ಈ ಬೆನ್ನಲ್ಲೆ ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ದುರ್ಗಾಷ್ಟಮಿ ಪುಣ್ಯ ದಿನದಂದು ಎಲೆಕ್ಷನ್ ಘೋಷಣೆಯಾಗಿದೆ ಕಾಂಗ್ರೆಸ್‌ ಭರವಸೆಗಳನ್ನು ಜಾರಿಗೆ ತರೋಣ ಎಂದಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ರಣದೀಪ್ ಸಿಂಗ್ ಸುರ್ಜೆವಾಲ, ದುರ್ಗಾಷ್ಟಮಿಯ ಪುಣ್ಯ ದಿನದಂದು ECI ಕರ್ನಾಟಕ ಚುನಾವಣೆಯನ್ನು ಘೋಷಿಸಿದೆ. 40 ಪರ್ಸೆಂಟ್ ಸರ್ಕಾರ ಮತ್ತು ಅದರ ಲಜ್ಜೆಗೆಟ್ಟ ಲೂಟಿಯಿಂದ ರಾಜ್ಯವನ್ನು ಮುಕ್ತಗೊಳಿಸಲು ಕಾಂಗ್ರೆಸ್ ಸಂಕಲ್ಪ ಮಾಡಿದೆ. #BrandKarnataka ಪುನರ್ ನಿರ್ಮಾಣ ಮಾಡೋಣ. ಕನ್ನಡಿಗರ ಅಭಿಮಾನ ಬೆಳೆಯಲಿ. ಕಾಂಗ್ರೆಸ್‌ ಭರವಸೆಗಳನ್ನು ಜಾರಿಗೆ ತರೋಣ. ಕರ್ನಾಟಕ ಗೆಲ್ಲಲಿ  ಎಂದು ತಿಳಿಸಿದ್ದಾರೆ.

ರಾಜ್ಯದಲ್ಲಿ ಒಂದೇ ಹಂತದಲ್ಲಿ ಮೇ 10 ರಂದು ಮತದಾನ ನಡೆಯಲಿದ್ದು, ಮೇ 13 ರಂದು ಮತ ಎಣಿಕೆ ನಡೆದು ಫಲಿತಾಂಶ ಪ್ರಕಟವಾಗಲಿದೆ.

Key words: Election -implement -Congress -promises- Randeep Singh Surjewala.