Sunday, September 13, 2026

BDA Apartments

Home Front Page ವಿಧಾನಸಭಾ ಚುನಾವಣಾ ಬಿಜೆಪಿ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಬೊಮ್ಮಾಯಿ ನೇಮಕ ಯಾವುದೇ ಪ್ರಯೋಜನವಿಲ್ಲ- ಹೆಚ್.ಎ ವೆಂಕಟೇಶ್.

ವಿಧಾನಸಭಾ ಚುನಾವಣಾ ಬಿಜೆಪಿ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಬೊಮ್ಮಾಯಿ ನೇಮಕ ಯಾವುದೇ ಪ್ರಯೋಜನವಿಲ್ಲ- ಹೆಚ್.ಎ ವೆಂಕಟೇಶ್.

ಮೈಸೂರು,ಮಾರ್ಚ್,10,2023(www.justkannada.in): ರಾಜ್ಯ  ವಿಧಾನಸಭಾ ಚುನಾವಣಾ ಬಿಜೆಪಿಯ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹಾಗೂ ನಿರ್ವಹಣಾ ಸಮಿತಿ ಸಂಚಾಲಕರಾಗಿ ಶೋಭಾ ಕರಂದ್ಲಾಜೆ ನೇಮಕದಿಂದ ಬಿಜೆಪಿ ಪಕ್ಷಕ್ಕೆ ಯಾವುದೇ ಪ್ರಯೋಜನವಾಗುವುದಿಲ್ಲ ಎಂದು ಕೆಪಿಸಿಸಿ ವಕ್ತಾರ ಹೆಚ್.ಎ ವೆಂಕಟೇಶ್ ಟೀಕಿಸಿದರು.

ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ ಹೆಚ್.ಎ ವೆಂಕಟೇಶ್,  ಬಸವರಾಜ್ ಬೊಮ್ಮಾಯಿ ಅವರು ಯಾವುದೇ ಕಾರ್ಯಕ್ರಮಗಳನ್ನು ಜನತೆಗೆ ನೀಡಿಲ್ಲ. ಈಗಾಗಲೇ  ವಿಜಯ ಸಂಕಲ್ಪ ಯಾತ್ರೆಯಲ್ಲಿ ಜನ ಭಾಗವಹಿಸಿಲ್ಲ. ಸರ್ಕಾರಿ ಹಣದಲ್ಲಿ ಸರ್ಕಾರದ ಸೌಲಭ್ಯಗಳನ್ನು ನೀಡಲು ವಿಜಯ ಸಂಕಲ್ಪ ಯಾತ್ರೆ ಉಪಯೋಗಿಸಿಕೊಂಡರು ಜನತೆ ಕಾರ್ಯಕ್ರಮವನ್ನು ತಿರಸ್ಕರಿಸಿದ್ದಾರೆ. ಇದೀಗ ಪ್ರಚಾರ ಸಮಿತಿಯ ಅಧ್ಯಕ್ಷರಾಗಿ ನೇಮಕ ಮಾಡಿರುವುದು ಬಿಜೆಪಿ ಅದ:ಪತನಕ್ಕೆ ಸಾಕ್ಷಿಯಾಗಿದೆ. ಬಿಜೆಪಿ ಪ್ರಚಾರವನ್ನು ಜನ ತಾತ್ಸರದಿಂದ ನೋಡುತ್ತಾರೆ. ಮುಖ್ಯಮಂತ್ರಿಯಾಗಿ ಕೊಟ್ಟ ಅಧಿಕಾರವನ್ನು ಜನರ ಕಲ್ಯಾಣ ಕಾರ್ಯಕ್ರಮಗಳನ್ನು ನಡೆಸಲಾಗದ ಬಸವರಾಜ್ ಬೊಮ್ಮಾಯಿ, ಪ್ರಚಾರ ಸಮಿತಿ ಅಧ್ಯಕ್ಷರಾಗಿ  ವೇಷ ಬದಲಿಸಿದವರಂತೆ ಕಾಣುತ್ತಾರೆ. ವೇಷ ಬದಲಾಯಿಸಿ ಬಂದು ಬಣ್ಣದ ಮಾತುಗಳಿಂದ ಜನರ ಮತ ಗಳಿಸಲು ಸಾಧ್ಯವಿಲ್ಲ ಎಂದು ಲೇವಡಿ ಮಾಡಿದರು.

ರಾಜ್ಯದ ಜನ ಬಹಳ ಸಂಕಷ್ಟದಲ್ಲಿದ್ದಾರೆ. ಕಾಂಗ್ರೆಸ್ ಪಕ್ಷವು ಈಗಾಗಲೇ ಉಚಿತ 200 ಯೂನಿಟ್ ವಿದ್ಯುತ್ ಯೋಜನೆಯ ಗೃಹ ಭಾಗ್ಯ, ಸಂಕಷ್ಟದಲ್ಲಿರುವ ಜನತೆಯ ನಿಮ್ಮದು ಬದುಕಿಗೆ ರೂ.2000 ಪ್ರತಿ ತಿಂಗಳ ಹಣ ಗೃಹಲಕ್ಷ್ಮಿ, ತಿಂಗಳಿಗೆ ಹತ್ತು ಕೆಜಿ ಅಕ್ಕಿ ಅನ್ನಭಾಗ್ಯ ಯೋಜನೆ ನೀಡುವ ಬಗ್ಗೆ ಗ್ಯಾರಂಟಿ ಕಾರ್ಡ್ ವಿತರಣೆಗೆ ಜನ ಮೆಚ್ಚಿದ್ದಾರೆ.  ಚುನಾವಣೆಗೆ ಮೊದಲೇ ಗ್ಯಾರಂಟಿ ಕಾರ್ಡ್ ವಿತರಣೆ ರಾಜಕೀಯ  ಇತಿಹಾಸದಲ್ಲಿ ಒಂದು ಹೊಸ ಮೈಲಿಗಲ್ಲಾಗಿದೆ. ಇಂತಹ ದೃಢಸಂಕಲ್ಪವನ್ನು ರಾಜ್ಯದ ಜನತೆಗೆ ಮುಟ್ಟಿಸುವಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಯಶಸ್ವಿಯಾಗಿದ್ದಾರೆ. ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರು ಬಹಳ ಉತ್ಸಾಹದಿಂದ  ಗ್ಯಾರಂಟಿ ಕಾರ್ಡ್ ಕಾರ್ಯಕ್ರಮವನ್ನು ಯಶಸ್ವಿಗೊಳಿಸುತ್ತಿದ್ದಾರೆ.  ಚುನಾವಣಾ ಪ್ರಣಾಳಿಕೆ ಸಮಿತಿಯ ಅಧ್ಯಕ್ಷರಾದ ಡಾ. ಜಿ ಪರಮೇಶ್ವರ್ ರಾಜ್ಯದ ಅಭಿವೃದ್ಧಿಗೆ ಪೂರಕವಾದ ಪ್ರಣಾಳಿಕೆಯನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಿದ್ದಾರೆ. ಪ್ರಣಾಳಿಕೆಯಲ್ಲಿ ರಾಜ್ಯದ ಜ್ವಲಂತ ಸಮಸ್ಯೆಗಳಿಗೆ ಬೆಳಕು ಚೆಲ್ಲಲಿದ್ದಾರೆ

ಹಾಗಾಗಿ ಬಿಜೆಪಿಯ ವಚನಭ್ರಷ್ಟತೆ, ಭ್ರಷ್ಟಾಚಾರ, ಜನ ವಿರೋಧಿ ಕಾರ್ಯಕ್ರಮಗಳನ್ನು ನೀಡಿರುವ ಬಿಜೆಪಿಗೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜನತೆಗೆ ತಕ್ಕ ಪಾಠ ಕಲಿಸಲಿದ್ದಾರೆ. ರಾಜ್ಯದ ಭವಿಷ್ಯದ ದೃಷ್ಟಿಯಿಂದ ಗ್ಯಾರೆಂಟಿ ಕಾರ್ಡ್ ಮೂಲಕ  ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಗ್ಯಾರಂಟಿಯಾಗಿದೆ ಎಂದು ಎಚ್. ಎ. ವೆಂಕಟೇಶ್ ವಿಶ್ವಾಸ ವ್ಯಕ್ತಪಡಿಸಿದರು.

Key words: Appointment -Bommai – BJP –campaign- committee -president – H.A Venkatesh-critisize