Saturday, August 15, 2026

BDA Apartments

Home Front Page ಎಲ್ಲಾ ಭರವಸೆ ಈಡೇರಿಸಿದ್ದೇನೆ ಎನ್ನುವ ಸಿದ್ಧರಾಮಯ್ಯ ಚಾಮುಂಡೇಶ್ವರಿಯಲ್ಲಿ ಸೋತಿದ್ದೇಕೆ..? ಶಾಸಕ ಕೆ.ಎಸ್ ಈಶ್ವರಪ್ಪ ವಾಗ್ದಾಳಿ.

ಎಲ್ಲಾ ಭರವಸೆ ಈಡೇರಿಸಿದ್ದೇನೆ ಎನ್ನುವ ಸಿದ್ಧರಾಮಯ್ಯ ಚಾಮುಂಡೇಶ್ವರಿಯಲ್ಲಿ ಸೋತಿದ್ದೇಕೆ..? ಶಾಸಕ ಕೆ.ಎಸ್ ಈಶ್ವರಪ್ಪ ವಾಗ್ದಾಳಿ.

ಶಿವಮೊಗ್ಗ,ಮಾರ್ಚ್,8,2023(www.justkannada.in): ಸಿದ್ಧರಾಮಯ್ಯ  ಎಲ್ಲಾ ಭರವಸೆ ಈಡೇರಿಸಿದ್ದಾರೆ ಎನ್ನುತ್ತಾರೆ ಬೇಡಿಕೆ ಈಡೇರಿಸಿದ್ದರೇ ಚಾಮುಂಡೇಶ್ವರಿಯಲ್ಲಿ ಯಾಕೆ ಸೋತರು ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ  ಪ್ರಶ್ನಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ಕೆ.ಎಸ್ ಈಶ್ವರಪ್ಪ,  ಸಿದ‍್ಧರಾಮಯ್ಯ ಸ್ವಾರ್ಥಿ. ಪಕ್ಷಾಂತರ ಪ್ರವೀಣ.  ಸಿದ್ಧರಾಮಯ್ಯ ಬಿಜೆಪಿ ಬಗ್ಗೆ ಮಾತನಾಡುತ್ತಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸಾಯುವ ಹಂತದಲ್ಲಿದೆ. ಸಿದ್ಧರಾಮಯ್ಯಗೆ ಪಕ್ಷ ನಿಷ್ಟೆ ಇಲ್ಲ ಎಂದರು.

ಇದೇ ವೇಳೆ ಡಿಕೆ ಶಿವಕುಮಾರ್ ವಿರುದ್ಧವೂ ಕಿಡಿಕಾರಿದ ಕೆ.ಎಸ್ ಈಶ್ವರಪ್ಪ, ಡಿಕೆ ಶಿವಕುಮಾರ್ ಮನೆಯಲ್ಲಿ ಎಷ್ಟ ಹಣ ಇದೆ ಅಂತಾ ರೇಡ್ ಆಗುವವರೆಗೂ ಡಿಕೆ ಶಿವಕುಮಾರ್ ಗೆ ಗೊತ್ತಿರಲಿಲ್ಲ.  ಅವರಿಗೆ   ಭ್ರಷ್ಟಾಚಾರದ ವಿರುದ್ಧ ಹೋರಾಡುವ ನೈತಿಕತೆ ಇಲ್ಲ. ಸುಳ್ಳು ಹೇಳುವ ಕಾಂಗ್ರೆಸ್ ಗೆ ಸೋಲು ಖಚಿತ ಎಂದು ವಾಗ್ದಾಳಿ ನಡೆಸಿದರು.

Key words: Siddaramaiah- lose -Chamundeshwari –MLA- KS Eshwarappa