Sunday, August 23, 2026

BDA Apartments

Home Front Page ಜೆಪಿ ನಡ್ಡಾಗೂ ರಾಜಕೀಯ ಜ್ಞಾನ ಇಲ್ಲ: ರಾಜ್ಯಕ್ಕೆ ನೂರು ಬಾರಿ ಬಂದ್ರೂ ಪ್ರಯೋಜನವಿಲ್ಲ- ಮಾಜಿ ಸಿಎಂ...

ಜೆಪಿ ನಡ್ಡಾಗೂ ರಾಜಕೀಯ ಜ್ಞಾನ ಇಲ್ಲ: ರಾಜ್ಯಕ್ಕೆ ನೂರು ಬಾರಿ ಬಂದ್ರೂ ಪ್ರಯೋಜನವಿಲ್ಲ- ಮಾಜಿ ಸಿಎಂ ಸಿದ್ಧರಾಮಯ್ಯ ಟಾಂಗ್.

ಚಿತ್ರದುರ್ಗ,ಫೆಬ್ರವರಿ,22,2023(www.justkannada.in): ಕಾಂಗ್ರೆಸ್ ಗೆ ಸಿದ್ದಾಂತ ಇಲ್ಲ ಎಂಬ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಹೇಳಿಕೆಗೆ ಮಾಜಿ ಸಿಎಂ ಸಿದ್ಧರಾಮಯ್ಯ ತಿರುಗೇಟು ನೀಡಿದ್ದಾರೆ.

ರಾಣಿ ಅಬ್ಬಕ್ಕ  ವರ್ಸಸ್ ಟಿಪ್ಪು ಚರ್ಚೆ ಆಗಲಿದೆ ಎಂದು ಅಮಿತ್ ಶಾ ಹೇಳಿದ್ದು ಸಿದ್ದಾಂತವೇ..?  ಗಾಂಧಿ ವರ್ಸಸ್ ಸಾವರ್ಕರ್ ಎಂದು ಹೇಳುವುದು ಸಿದ್ದಾಂತವೇ..?  ಸಿದ್ಧರಾಮಯ್ಯರನ್ನ ಮುಗಿಸಿ ಎಂದು ಹೇಳುವುದು ಸಿದ್ದಾಂತವೇ..?  ಬಿಜೆಪಿಯಬರಿಗೆ ಯಾವ ಸಿದ್ದಾಂತವಿದೆ ಎಂದು ಸಿದ್ದರಾಮಯ್ಯ ಟಾಂಗ್ ನೀಡಿದರು.

ಚಿತ್ರದುರ್ಗದಲ್ಲಿ ಇಂದು ಮಾತನಾಡಿದ ಸಿದ್ಧರಾಮಯ್ಯ, ನಳೀನ್ ಕುಮಾರ್ ಕಟೀಲ್ ಗೆ ರಾಜಕೀಯ ಜ್ಞಾನ ಇಲ್ಲ  ಅಂದುಕೊಂಡಿದ್ದೆ ಜೆಪಿ ನಡ್ಡಾಗೂ ರಾಜಕೀಯ ಜ್ಞಾನ ಇಲ್ಲ. ಮೋದಿ ಜೆಪಿ ನಡ್ಡಾ, ಅಮಿತ್ ಶಾ ರಾಜ್ಯಕ್ಕೆ  100 ಬಾರಿ ಬಂದರೂ ಪ್ರಯೋಜನವಿಲ್ಲ ರಾಜ್ಯದ ಜನ ಬಿಜೆಪಿ ಸೋಲಿಸಲು ತೀರ್ಮಾನ ಮಾಡಿದ್ದಾರೆ ಎಂದರು.

ರಾಜ್ಯ ಸರ್ಕಾರದ ಮೇಲೆ 40 ಪರ್ಸೆಂಟ್ ಆರೋಪ ಮಾಡಿದ್ದೇವೆ. ಆದರೆ ದಾಖಲೆಗಳನ್ನ ಕೊಡಿ ಎಂದು ರಾಜ್ಯ ಸರ್ಕಾರ ನುಣುಚಿಕೊಳ್ಳುತ್ತಿದೆ ಯಾವುದರ ಬಗ್ಗೆಯೂ ತನಿಖೆ ಮಾಡಲು ಸರ್ಕಾರ ಸಿದ್ದವಿಲ್ಲ. ನಮ್ಮ ಆರೋಪದ ಬಗ್ಗೆ ತನಿಖೆ ಮಾಡಲಿ. ನಮ್ಮ ಆಡಳಿತ ಅವಧಿಯಲ್ಲೂ ಅಕ್ರಮ ಆಗಿದ್ದರೇ ತನಿಖೆ  ಮಾಡಲಿ ಎಂದು ಸಿದ್ದರಾಮಯ್ಯ ಹೇಳಿದರು.

Key words: JP Nadda- no -political knowledge- Former CM -Siddaramaiah