Thursday, October 1, 2026

BDA Apartments

Welcome to Just Kannada Online News Portal BDA JK_Adv BDA Adv
Home Front Page ಅಭಿವೃದ್ದಿ, ಹಿಂದುತ್ವ ಅಜೆಂಡಾದಡಿ ಮತ ಕೇಳುತ್ತೇವೆ: ನನ್ನ ಸ್ಪರ್ಧೆ ಬಗ್ಗೆ ಹೈಕಮಾಂಡ್ ನಿರ್ಧಾರ- ಬಿವೈ ವಿಜಯೇಂದ್ರ.

ಅಭಿವೃದ್ದಿ, ಹಿಂದುತ್ವ ಅಜೆಂಡಾದಡಿ ಮತ ಕೇಳುತ್ತೇವೆ: ನನ್ನ ಸ್ಪರ್ಧೆ ಬಗ್ಗೆ ಹೈಕಮಾಂಡ್ ನಿರ್ಧಾರ- ಬಿವೈ ವಿಜಯೇಂದ್ರ.

ಮಂಡ್ಯ,ಫೆಬ್ರವರಿ,22,2023(www.justkannada.in): ಅಭಿವೃದ್ದಿ, ಹಿಂದುತ್ವ ಅಜೆಂಡಾದಡಿ ನಾವು ಮತ ಕೇಳುತ್ತೇವೆ. ನನ್ನ ಸ್ಪರ್ಧೆ ಬಗ್ಗೆ ಹೈಕಮಾಂಡ್ ನಿರ್ಧಾರ ಮಾಡುತ್ತದೆ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ  ಬಿವೈ ವಿಜಯೇಂದ್ರ ತಿಳಿಸಿದರು.

ಮಂಡ್ಯದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಬಿವೈ ವಿಜಯೇಂದ್ರ, ಮಂಡ್ಯ, ವರುಣಾ  ಅಥವಾ ಶಿಕಾರಿಪುರ ಅಂತೇನಿಲ್ಲ. ಪಕ್ಷದ ವರಿಷ್ಟರು ಹೇಳಿದ ಕಡೆ ನಾನು ಸ್ಪರ್ಧಿಸುತ್ತೇನೆ . ಮಂಡ್ಯದಲ್ಲಿ ಮನೆ ಮಾಡಲೇಬೇಕು ಅಂತ ಏನಿಲ್ಲ. ಜನರ ಮನಸ್ಸಿನಲ್ಲಿ ಮನೆ ಮಾಡಿದರೇ ಸಾಕು ಎಂದರು.

ರಾಜ್ಯ ಯುವ ಮೋರ್ಚ ಸಮಾವೇಶದ ಹೊಣೆ ನನಗೆ ನೀಡಿದ್ದಾರೆ. ರಾಜ್ಯಾದ್ಯಂತ ಸಂಚರಿಸಿ ಪಕ್ಷಸಂಘಟನೆ ಕೆಲಸ ಮಾಡುತ್ತೇನೆ. ಡಬಲ್ ಇಂಜಿನ್ ಸರ್ಕಾರವನ್ನ ರಾಜ್ಯದ ಜನ ಒಪ್ಪಿದ್ದಾರೆ ಅಭಿವೃದ್ದಿ, ಹಿಂದುತ್ವ ಅಜೆಂಡಾದಡಿ ನಾವು ಮತ ಕೇಳುತ್ತೇವೆ.  ಹಳೇ ಮೈಸೂರು ಭಾಗ ಸೇರಿ ರಾಜ್ಯದಲ್ಲಿ ಮತ್ತೆ ಬಿಜೆಪಿ ಗೆಲ್ಲುತ್ತೆ ಎಂದು ಬಿವೈ ವಿಜಯೇಂದ್ರ ತಿಳಿಸಿದರು.

Key words:  votes -under –development-Hindutva -agenda- BY Vijayendra.