Thursday, August 13, 2026

BDA Apartments

Home Front Page ತೌಡು ಕುಟ್ಟಿದ ಭಾಷಣ ಎಂಬ ಸಿದ್ಧರಾಮಯ್ಯ ಹೇಳಿಕೆಗೆ ಸಚಿವ ಸುಧಾಕರ್ ತಿರುಗೇಟು.

ತೌಡು ಕುಟ್ಟಿದ ಭಾಷಣ ಎಂಬ ಸಿದ್ಧರಾಮಯ್ಯ ಹೇಳಿಕೆಗೆ ಸಚಿವ ಸುಧಾಕರ್ ತಿರುಗೇಟು.

ಬೆಂಗಳೂರು,ಫೆಬ್ರವರಿ,22,2023(www.justkannada.in): ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋಟ್ ಅವರಿಂದ ತೌಡು ಕುಟ್ಟಿದ ಭಾಷಣ ಮಾಡಿಸಿದ್ದಾರೆ ಎಂದು ಟೀಕಿಸಿದ್ದ ವಿಪಕ್ಷ ನಾಯಕ ಸಿದ್ಧರಾಮಯ್ಯಗೆ ಆರೋಗ್ಯ ಸಚಿವ ಡಾಕೆ.ಸುಧಾಕರ್ ತಿರುಗೇಟು ನೀಡಿದ್ದಾರೆ.

ಈ ಕುರಿತು ಮಾತನಾಡಿದ ಸಚಿವ ಡಾ.ಕೆ ಸುಧಾಕರ್, ಭತ್ತ, ಅಕ್ಕಿ ಯಾರದ್ದು, ತೌಡು ಯಾರದ್ದು ಅನ್ನೋದು ಜನರ ಮುಂದಿದೆ. ಅಕ್ಕಿ ಕೊಟ್ಟಿದ್ದು ನಮ್ಮ ಕೇಂದ್ರ ಸರ್ಕಾರ. ಆದರೆ ಸಿದ‍್ಧರಾಮಯ್ಯ ಅಕ್ಕಿ ಕೊಟ್ಟಿದ್ದು ನಾವು ಎನ್ನುತ್ತಿದ್ದಾರೆ.  ಅಕ್ಕಿ ಕೊಟ್ಟಿದ್ದು ನಾವು ಎಂದು ಮಾರ್ಕೆಟಿಂಗ್ ಮಾಡಿಕೊಂಡರು ಎಂದು ಕಿಡಿಕಾರಿದರು.

ಸರ್ಕಾರವು ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋಟ್ ಅವರಿಂದ ತೌಡು ಕುಟ್ಟಿದ ಭಾಷಣ ಮಾಡಿಸಿದ್ದಾರೆ. ಸರ್ಕಾರದ ಆಡಳಿತದ ಹಿನ್ನೋಟ ಹಾಗೂ ಮುನ್ನೋಟ ಇರಬೇಕಿದ್ದ ಭಾಷಣದಲ್ಲಿ ಹಿನ್ನೋಟ ಸುಳ್ಳುಗಳಿಂದ ಕೂಡಿದ್ದರೆ, ಮುನ್ನೋಟ ಇರಲೇ ಇಲ್ಲ. ರಾಜ್ಯಪಾಲರ ಭಾಷಣದ ಮೂಲಕ ಭತ್ತ ಕುಟ್ಟಿದರೆ ಅಕ್ಕಿ ಆದರೂ ಬರುತ್ತಿತ್ತು, ತೌಡು ಕುಟ್ಟಿದರೆ ಏನು ಫಲ? ಎಂದು ಸಿದ್ಧರಾಮಯ್ಯ ವ್ಯಂಗ್ಯವಾಡಿದ್ದರು.

Key words: Minister- Sudhakar – Siddaramaiah- statement