Wednesday, November 4, 2026

Dasara Wishes

Happy Dasara
Home Front Page ಫೆ.17 ರಂದು ಬೆಳಿಗ್ಗೆ 10:15ಕ್ಕೆ ರಾಜ್ಯ ಬಜೆಟ್.

ಫೆ.17 ರಂದು ಬೆಳಿಗ್ಗೆ 10:15ಕ್ಕೆ ರಾಜ್ಯ ಬಜೆಟ್.

ಬೆಂಗಳೂರು,ಫೆಬ್ರವರಿ,14,2023(www.justkannada.in):  ಫೆಬ್ರವರಿ 17ರಂದು ಬೆಳಿಗ್ಗೆ 10:15ಕ್ಕೆ  ರಾಜ್ಯ ಬಜೆಟ್ ಮಂಡನೆಯಾಗಲಿದೆ ಎಂದು ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಘೋಷಿಸಿದರು.

ಈ ಬಗ್ಗೆ ವಿಧಾನಸಭೆಯಲ್ಲಿ ಮಾಹಿತಿ ನೀಡಿದ  ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಇದೇ ಶುಕ್ರವಾರ ಬೆಳಗ್ಗೆ 10:15 ಕ್ಕೆ ಸಿಎಂ ಬಸವರಾಜ ಬೊಮ್ಮಾಯಿ  ರಾಜ್ಯ ಬಜೆಟ್ ಮಂಡನೆ ಮಾಡಲಿದ್ದಾರೆ . ಸುಮಾರು ಒಂದು ಗಂಟೆ ಕಾಲ ಬಜೆಟ್ ಭಾಷಣ ಇರಲಿದೆ. ಬಳಿಕ ಫೆಬ್ರುವರಿ 20ರಿಂದ 22ರವರೆಗೂ ಬಜೆಟ್  ಮೇಲೆ ಚರ್ಚೆ ನಡೆಯಲಿದೆ. ಫೆಬ್ರುವರಿ 22ರಂದು ಸರ್ಕಾರದಿಂದ ಉತ್ತರ ಬರಲಿದೆ ಎಂದು ತಿಳಿಸಿದರು.

ಈಗಾಗಲೇ ಬಜೆಟ್ ಅಧಿವೇಶನ ಫೆಬ್ರುವರಿ 10ರಂದು ಆರಂಭವಾಗಿದ್ದು, ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ ನಡೆಯುತ್ತಿದೆ.ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರಕ್ಕೆ ಇದು ಕೊನೆಯ ಬಜೆಟ್ ಆಗಿದೆ. ಏಪ್ರಿಲ್–ಮೇ ತಿಂಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು ಈ ಹಿನ್ನೆಲೆಯಲ್ಲಿ ಈ ಬಾರಿ ಬಜೆಟ್ ಮೇಲೆ ಕುತೂಹಲವಿದೆ.

Key words: State budget – February 17 – 10.15 am