Thursday, September 24, 2026

BDA Apartments

Home Front Page ಅಂದು ನಾನು ಅಧಿಕಾರ ಕೊಡಲು ಸಿದ್ಧನಿದ್ಧೆ: ಆದ್ರೆ  ಪೇಶ್ವೆಗೆ ಸೇರಿದವರು ಬಿಎಸ್ ವೈಗೆ ಅಧಿಕಾರ ತಪ್ಪಿಸಿದ್ರು-...

ಅಂದು ನಾನು ಅಧಿಕಾರ ಕೊಡಲು ಸಿದ್ಧನಿದ್ಧೆ: ಆದ್ರೆ  ಪೇಶ್ವೆಗೆ ಸೇರಿದವರು ಬಿಎಸ್ ವೈಗೆ ಅಧಿಕಾರ ತಪ್ಪಿಸಿದ್ರು- ಹೆಚ್.ಡಿಕೆ ಗುಡುಗು.

ಕಾರವಾರ,ಫೆಬ್ರವರಿ,9,2023(www.justkannada.in): 2008ರ ಮೈತ್ರಿ ಸರ್ಕಾರದ ಕುರಿತು ಮಾತನಾಡಿದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ಅಂದು ನಾನು ಅಧಿಕಾರ ಕೊಡಲು ಸಿದ್ಧನಿದ್ಧೆ. ಆದರೆ  ಪೇಶ್ವೆ ವಂಶಸ್ಥರು ಬಿಎಸ್ ವೈಗೆ ಅಧಿಕಾರ ತಪ್ಪಿಸಿದ್ರು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಿರುದ್ಧ ಪರೀಕ್ಷವಾಗಿ ಗುಡುಗಿದ್ದಾರೆ.

ಕಾರವಾರದಲ್ಲಿ ಇಂದು ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ, ಬಿಎಸ್ ವೈಗೆ ಅಧಿಕಾರ ತಪ್ಪಲು ಪೇಶ್ವೆ ಡಿಎನ್ ಎ ಕಾರಣ. ನಾನು ಬಿಎಸ್ ವೈಗೆ ಅಧಿಕಾರ ಕೊಡಲು ಸಿದ್ದನಿದ್ದೆ. ಆದರೆ ಪೇಶ್ವೆಗೆ ಸೇರಿದವರು ಬಿಎಸ್ ವೈ ಸಿಎಂ ಆಗದಂತೆ ಅಧಿಕಾರ ತಪ್ಪಿಸಿದರು. ಕಷ್ಟಪಟ್ಟು 2ನೇ ಬಾರಿ ಬಿಎಸ್ ವೈ  ಸಿಎಂ ಆದರು. ಆಗಲೂ  ಅಧಿಕಾರದಿಂದ ತೆಗೆದು ಕಾಟಕೊಟ್ಟರು. ಅವರು ಹೇಗೆ ನಡೆದುಕೊಂಡರು ಅಂತಾ ಗೊತ್ತು ಎಂದು ವಾಗ್ದಾಳಿ ನಡೆಸಿದರು.

ಬಿಎಸ್ ವೈರನ್ನ ಹೇಗೆ ನಡೆಸಿಕೊಂಡರು ಎಂದು ಎಲ್ಲರಿಗೂ ಗೊತ್ತಿದೆ. ನಾನು ದಲಿತರು ವೀರಶೈವರು ಸೆರಿ ಎಲ್ಲಾ ಸಮುದಾಯಕ್ಕೂ ಗೌರವ ಕೊಟ್ಟಿದ್ದೇನೆ ಎಂದು ಹೆಚ್.ಡಿ ಕುಮಾರಸ್ವಾಮಿ ಹೇಳಿದರು.

Key words: power- BSY- Peshwe- lost -power- Former CM- HD Kumaraswamy