ಮಂಡ್ಯ,ಫೆಬ್ರವರಿ,4,2023(www.justkannada.in): ಕೆ.ಆರ್ ಪೇಟೆಯಲ್ಲಿ ಜೆಡಿಎಸ್ ನಿಂದ ಮಾಜಿ ಸಚಿವ ಹೆಚ್.ಡಿ ರೇವಣ್ಣ ಸ್ಪರ್ಧೆ ಬಗ್ಗೆ ಚರ್ಚೆಯಾಗುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ನಾರಾಯಣಗೌಡ ಟಾಂಗ್ ನೀಡಿದ್ದಾರೆ.![]()
ಈ ಕುರಿತು ಕೆ.ಆರ್ ಪೇಟೆಯಲ್ಲಿ ಮಾತನಾಡಿದ ಸಚಿವ ನಾರಾಯಣಗೌಡ, ಹೆಚ್.ಡಿ ರೇವಣ್ಣ ಇಲ್ಲ ಅಂದ್ರೆ ದೇವೇಗೌಢರೇ ಬಂದು ಸ್ಪರ್ಧಿಸಲಿ. ಕೆ.ಆರ್ ಪೇಟೆಯಲ್ಲಿ ಹೆಚ್.ಡಿ ದೇವೇಗೌಡರಾದ್ರೂ ಸ್ಪರ್ಧಿಸಲಿ ರೇವಣ್ಣರಾದ್ರೂ ಬರಲಿ ಕುಮಾರಣ್ಣ ಆದ್ರೂ ಬಂದು ಸ್ಪರ್ಧಿಸಲಿ ನನಗೆ ಯಾವುದೇ ಭಯದ ವಾತಾವರಣ ಇಲ್ಲ. ಯಾರು ಗೆಲ್ಲಬೇಕೆಂದು ನಮ್ಮ ತಾಲ್ಲೂಕಿನ ಜನರು ನಿರ್ಧರಿಸುತ್ತಾರೆ ಎಂದು ಹೇಳಿದರು.
Key words: HD Revanna – KR pet-contest-Minister -Narayana Gowda.







