ಅಕ್ರಮ ಗಣಿಗಾರಿಕೆ ವೇಳೆ ಬಂಡೆ ಬಿದ್ದು ವ್ಯಕ್ತಿ ದುರ್ಮರಣ.

ಕೋಲಾರ,ಫೆಬ್ರವರಿ,4,2023(www.justkannada.in): ಅಕ್ರಮ ಗಣಿಗಾರಿಕೆ ವೇಳೆ ಬಂಡೆ ಬಿದ್ದು ವ್ಯಕ್ತಿ ದುರ್ಮರಣಕ್ಕೀಡಾದ ಘಟನೆ ಕೋಲಾರ ಜಿಲ್ಲೆಯಲ್ಲಿ ನಡೆದಿದೆ.

ಮಾಲೂರು ತಾಲ್ಲೂಕಿನ ಟೇಕಲ್ ಉಳ್ಳೇರಹಳ್ಳಿ ಬೆಟ್ಟದಲ್ಲಿ ಈ ಘಟನೆ ನಡೆದಿದೆ. ಮೂಲದ ಮಹೇಂದ್ರ(38) ಮೃತ ವ್ಯಕ್ತಿ. ಇಟಾಚಿಯಲ್ಲಿ ಬಂಡೆ ಹೊಡೆಯುವ ವೇಳೆ ಬಂಡೆ ಮಹೇಂದ್ರ ಮೇಲೆ ಉರುಳಿ ಬಿದ್ದಿದ್ದು ಸ್ಥಳದಲ್ಲೇ ಮಹೇಂದ್ರ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಮಾಸ್ತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Key words:  person- died -after – rock- fell – illegal mining