Tuesday, September 29, 2026

BDA Apartments

ಬಹುಭಾಷಾ ನಟಿ ಜಮುನಾ(86) ನಿಧನ BDA JK_Adv BDA Adv
Home Cinema ಬಹುಭಾಷಾ ನಟಿ ಜಮುನಾ(86) ನಿಧನ.

ಬಹುಭಾಷಾ ನಟಿ ಜಮುನಾ(86) ನಿಧನ.

ಹೈದರಾಬಾದ್,ಜನವರಿ,27,2023(www.justkannada.in): ಬಹುಭಾಷಾ ಹಿರಿಯ ನಟಿ ಜಮುನಾ(86) ಇಂದು ನಿಧನರಾಗಿದ್ದಾರೆ.

ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು, ಹೈದರಾಬಾದ್‌ನಲ್ಲಿರುವ ನಿವಾಸದಲ್ಲಿ ನಿಧನರಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಕನ್ನಡ, ತೆಲುಗು ತಮಿಳು ಭಾಷೆಗಳಲ್ಲಿ ಹಿರಿಯ ನಟಿ ಜಮುನಾ  ನಟಿಸಿದ್ದರು.  ನಟ ಸಾರ್ವಭೌಮ ಡಾ.ರಾಜ್ ಕುಮಾರ್ ನಟನೆಯ ಸಾಕ್ಷಾತ್ಕಾರ ಚಿತ್ರದಲ್ಲಿ ನಟಿ ಜಮುನಾ ಅವರು ನಟಿಸಿದ್ದರು.

ಜಮುನಾ ಅವರು 1936 ಆಗಸ್ಟ್ 30 ರಂದು ಹಂಪಿಯಲ್ಲಿ ಜನಿಸಿದರು. 1953ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟ ಅವರು ಹಲವು ದಶಕಗಳ ಕಾಲ ಚಿತ್ರರಂಗಕ್ಕಾಗಿ ಶ್ರಮಿಸಿದರು. ಅವರ ಅಗಲಿಕೆಗೆ ಗಣ್ಯರು ಹಾಗೂ ಅಭಿಮಾನಿಗಳು ಸಂತಾಪ ಸೂಚಿಸುತ್ತಿದ್ದಾರೆ.

Key words: Veteran actress-Jamuna (86) -passed away.