ನನ್ನ ಸಣ್ಣ ಸೇವೆಗೆ ಪದ್ಮವಿಭೂಷಣ ನೀಡಿದ್ದಾರೆ- ಪ್ರಧಾನಿ ಮೋದಿ, ಅಮಿತ್ ಶಾಗೆ  ಧನ್ಯವಾದ ಹೇಳಿದ ಮಾಜಿ ಸಿಎಂ ಎಸ್.ಎಂ ಕೃಷ್ಣ.

ಬೆಂಗಳೂರು,ಜನವರಿ,27,2023(www.justkannada.in): ನನ್ನ ಸಣ್ಣ ಸೇವೆಗೆ ಪದ್ಮವಿಭೂಷಣ ಪ್ರಶಸ್ತಿ ನೀಡಿದ್ದಾರೆ.   ಪದ್ಮ ವಿಭೂಷಣ ನೀಡಿದ್ದಕ್ಕೆ ಪ್ರಧಾನಿ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಧನ್ಯವಾದ ಹೇಳುತ್ತೇನೆ ಎಂದು ಮಾಜಿ ಸಿಎಂ ಎಸ್.ಎಂ ಕೃಷ್ಣ ಹೇಳಿದರು.

ಇಂದು ಸಿಎಂ ಬಸವರಾಜ ಬೊಮ್ಮಾಯಿ ಮಾಜಿ ಸಿಎಂ ಎಸ್.ಎಂ ಕೃಷ್ಣ ಅವರನ್ನ ಭೇಟಿಯಾದರು. ಈ ವೇಳೆ ಮಾತನಾಡಿದ ಎಸ್.ಎಂ ಕೃಷ್ಣ,  ಬಿಸಿಯೂಟ ಯಶಸ್ವಿನಿ ಯೋಜನೆ.  ನನ್ನ ಹೃದಯಕ್ಕೆ ಹತ್ತಿರ ಯೋಜನೆ. ಯಶಸ್ವಿನಿ ಯೋಜನೆ ಮತ್ತಷ್ಟು ಸುಧಾರಣೆಗೊಳಿಸಿ ಜಾರಿ ಮಾಡಿದ್ದಾರೆ. ಅದಕ್ಕಾಗಿ ಸಿಎಂ ಬೊಮ್ಮಾಯಿಗೆ ಧನ್ಯವಾದ ಹೇಳುತ್ತೇನೆ ಎಂದರು.

ನಂತರ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಎಸ್.ಎಂ ಕೃಷ್ಣ ಅವರಿಗೆ ಪದ್ಮವಿಭೂಷಣ ಪ್ರಶಸ್ತಿ ಸಿಕ್ಕಿದ್ದಕ್ಕೆ ಖುಷಿಯಾಗಿದೆ. ಎಸ್ ಎಂ ಕೃಷ್ಣ ಸಿಎಂ ಆಗಿದ್ದಾಗ ಹಲವು ಯೋಜನೆ ಜಾರಿ ಮಾಡಿದ್ದಾರೆ ಎಸ್ ಎಂ ಕೃಷ್ಣ ಸಾರ್ವಜನಿಕ ಜೀವನ ಎಲ್ಲರೂ ಮಾದರಿ. ಸರಳ ಸೃಜನಶೀಲ ರಾಜಕಾರಣಿ ಉತ್ತಮವಾಗಿ ಆಡಳಿತ ನಡೆಸಿದವರು. ಎಸ್ ಎಂ ಕೃಷ್ಣ ಕಾರ್ಯವೈಖರಿ ಗುರುತಿಸಿ ಮೋದಿ ಪದ್ಮವಿಭೂಷಣ ನೀಡಿದ್ದಾರೆ ರಾಜ್ಯದ ಜನತೆ ಪರವಾಗಿ  ಅಭಿಂದನೆ ಸಲ್ಲಿಸುತ್ತೇನೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.

Key words: Padma Vibhushana-award-  Former CM-SM Krishna -thanked -PM Modi- Amit Shah.