ಯೂಟ್ಯೂಬ್ ನೋಡಿ ನಕಲಿ ನೋಟು ಪ್ರಿಂಟ್ ಮಾಡುತ್ತಿದ್ದವ ಅಂದರ್.

ಬೆಂಗಳೂರು,ಜನವರಿ,27,2023(www.justkannada.in): ಯೂಟ್ಯೂಬ್ ನೋಡಿ ನಕಲಿ ನೋಟು ಪ್ರಿಂಟ್ ಮಾಡಿ ವ್ಯವಹಾರ ಮಾಡುತ್ತಿದ್ದವನನ್ನ ನಗರದ ಸುಬ್ರಮಣ್ಯ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಪುಲ್ಲಲರೇವು ರಾಜು ಬಂಧಿತ ಆರೋಪಿ. ನಗರದ ಅನಂತಪುರದಲ್ಲಿ ಮನೆ ಪಡೆದಿದ್ದ ಪುಲ್ಲಲರೇವು ರಾಜು ಆರ್​ಬಿಐ ನೋಟ್ ​ಗೂ ಟಕ್ಕರ್ ಕೊಡುವಂತೆ ರೂಂನಲ್ಲಿ ಒಬ್ಬನೇ ಕುಳಿತು ನಕಲಿ ನೋಟ್ ತಯಾರಿಸುತ್ತಿದ್ದ. ಏಳನೇ ತರಗತಿ ಓದಿದ್ದ ಈತ, ಕೇವಲ ಯೂಟ್ಯೂಬ್ ವಿಡಿಯೋ ನೋಡಿ ನಕಲಿ ನೋಟು ತಯಾರಿ ಮಾಡುವುದನ್ನ ಕಲಿತಿದ್ದನು.

ಮನೆಯಲ್ಲಿ ಶೋ ರೂಂನಲ್ಲಿ ಕೆಲಸ ಮಾಡುತ್ತಿದ್ದಾಗಿ ಹೇಳಿಕೊಂಡಿದ್ದ ರಾಜು ಪ್ರತ್ಯೇಕ ಮನೆ ಪಡೆದು ನೋಟ್ ಪ್ರಿಂಟ್ ಕೆಲಸ ಆರಂಭಿಸಿದ್ದಾನೆ. ಅಧಿಕ ಹಣ ಮಾಡುವ ಉದ್ದೇಶದಿಂದ ಯೂಟ್ಯೂಬ್ ವಿಡಿಯೋಗಳನ್ನ ಸತತವಾಗಿ ಆರು ತಿಂಗಳುಗಳ ಕಾಲ ನೋಡಿ, ನಂತರ ಈ ದಂಧೆಗೆ ಬಂದಿದ್ದಾನಂತೆ.

ದಕ್ಷಿಣ ಭಾರತದ ಹಲವು ರಾಜ್ಯಗಳಿಗೆ ನಕಲಿ ನೋಟ್​ ಗಳನ್ನು ಶಿಫ್ಟ್ ಮಾಡಿದ್ದಾನೆ ಎನ್ನಲಾಗಿದೆ. ತಮಿಳುನಾಡು, ಆಂಧ್ರ, ಕರ್ನಾಟಕ ಸೇರಿದಂತೆ ಹಲವು ಕಡೆಗಳಲ್ಲಿ ಒಂದು ಲಕ್ಷ ಅಸಲಿ ನೋಟಿಗೆ ನಾಲ್ಕು ಲಕ್ಷ ನಕಲಿ ನೋಟು ನೀಡುತ್ತಿರುವುದಾಗಿ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ. ಸದ್ಯ ಆರೋಪಿ ಜೊತೆ ಸಂಪರ್ಕ ಹೊಂದಿದ್ದ ವ್ಯಕ್ತಿಗಳಿಗಾಗಿ ಸುಬ್ರಮಣ್ಯಪುರ ಪೊಲೀಸರು ಬಲೆ ಬಿಸಿದ್ದಾರೆ.

Key words: arrest-printing-fake notes – watching -YouTube.