Wednesday, September 30, 2026

BDA Apartments

Home Front Page ಮೈಸೂರಿನ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದಲ್ಲಿ M.Tech ಕೋರ್ಸ್ ಪ್ರವೇಶಾತಿಗೆ ಅರ್ಜಿ ಆಹ್ವಾನ.

ಮೈಸೂರಿನ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದಲ್ಲಿ M.Tech ಕೋರ್ಸ್ ಪ್ರವೇಶಾತಿಗೆ ಅರ್ಜಿ ಆಹ್ವಾನ.

ಮೈಸೂರು,ಡಿಸೆಂಬರ್,30,2022(www.justkannada.in):  ಮೈಸೂರಿನ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ(GTTC)ದಲ್ಲಿ M.Tech ಕೋರ್ಸ್ ಪ್ರವೇಶಾತಿಗೆ ಅರ್ಜಿ ಆಹ್ವಾನಿಸಲಾಗಿದೆ.

ಮೈಸೂರಿನ ಬೆಳಗೊಳ ಕೈಗಾರಿಕಾ ಪ್ರದೇಶ ಬಳಿ ಇರುವ  ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದಲ್ಲಿ M.Tech ಕೋರ್ಸ್ ಪ್ರವೇಶಾತಿಗೆ ಅರ್ಜಿ ಆಹ್ವಾನಿಸಲಾಗಿದೆ.

ಮಂಜೂರಾದ ಸೀಟುಗಳು:  18

ಅವಧಿ: ಎರಡುವರ್ಷಗಳು – ಪೂರ್ಣ ಅವಧಿ

ಕೋರ್ಸ್ ಗೆ ಅರ್ಹತೆ: ಮೆಕ್ಯಾನಿಕಲ್ ಇಂಜಿನಿಯರಿಂಗ್/ ಆಟೋಮೊಬೈಲ್ ಇಂಜಿನಿಯರಿಂಗ್/ ಆಟೊಮೇಷನ್,  ರೊಬೊಟಿಕ್ಸ್ ಇಂಜಿನಿಯರಿಂಗ್ ನಲ್ಲಿ / ಇಂಡಸ್ಟ್ರೀಯಲ್ ಮತ್ತು ಪ್ರೊಡಕ್ಷನ್ ಇಂಜಿನಿಯರಿಂಗ್ / ಟೂಲ್ ಇಂಜಿನಿಯರಿಂಗ್/ ಮೆಕಾಟ್ರಾನಿಕ್ಸ್ ಇಂಜಿನಿಯರಿಂಗ್‍ ಇವುಗಳಲ್ಲಿ ಬ್ಯಾಚುಲರ್ ಪದವಿ.

ಆಯ್ಕೆ ಪ್ರಕ್ರಿಯೆ : ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಪಿಜಿಸಿಇಟಿ ಮೂಲಕ [ಕೆಇಎ] ಅಥವಾ ನೇರಪ್ರವೇಶ.

ಎಂ.ಟೆಕ್. ಕೋರ್ಸ್ ಪಠ್ಯಕ್ರಮ ಹೀಗಿದೆ.

ಒಂದನೇ ಸೆಮಿಸ್ಟರ್: ಪ್ರೆಸ್ಟೂಲ್ ಸೈನ್, ಜಿಗ್ಸ್ ಮತ್ತುಫಿಕ್ಚರ್ ಗಳು, ಗೇಜ್ ಗಳು ಮತ್ತು ಮಾಪನಗಳು, ಸೀಮಿತ ಅಂಶ ವಿಶ್ಲೇಷಣೆ,, ಅನ್ವಯಿಕ ಗಣಿತ, ಸಂಶೋಧನಾ ವಿಧಾನ ಮತ್ತು ಐಪಿಆರ್. ಟೂಲ್ಡಿ ಸೈನ್ ಎಂಜಿನಿಯರಿಂಗ್ ಲ್ಯಾಬ್-1 ಮತ್ತು ಸೆಮಿನಾರ್.

ಎರಡನೇ ಸೆಮಿಸ್ಟರ್: ಡೈಕಾಸ್ಟಿಂಗ್ ಮತ್ತು ಡೈಡಿಸೈನ್, ಪ್ಲಾಸ್ಟಿಕ್ ಮೋಲ್ಡ್ ಸೈನ್, ಸಿಎನ್ ಸಿ ಮೆಷಿನಿಂಗ್ ಮತ್ತು ಪ್ರೋಗ್ರಾಮಿಂಗ್, ಪ್ರೊಡಕ್ಟಿಡ್ ಸೈನ್ ಟೆಕ್ನಾಲಜಿ, ಮೆಟೀರಿಯಲ್ಸ್ ಪರೀಕ್ಷೆ, ಮೆಟೀರಿಯಲ್ ಅನಾಲಿಸಿಸ್, ರಾಪಿಡ್ಪ್ರೊ ಟೊಟೈಪಿಂಗ್, ನಾನ್ ಟ್ರೆಡಿಶನಲ್ ಮಷಿನಿಂಗ್, ಡಿಸೈನ್ ಫರ್ಮ್ಯಾನುಫ್ಯಾಕ್ಚರ್,  ಟೂಲ್ಡಿಸೈನ್ ಇಂಜಿನಿಯರಿಂಗ್ ಲ್ಯಾಬ್-2 ಮತ್ತು ಸೆಮಿನಾರ್ ನೊಂದಿಗೆ ಮಿನಿ ಪ್ರಾಜೆಕ್ಟ್.

Key words: Application -Invitation -M.Tech -Course -Admission -GTTC