Sunday, September 20, 2026

BDA Apartments

ಕೋವಿಡ್ ಆತಂಕ ಹಿನ್ನೆಲೆ ಕಟ್ಟೆಚ್ಚರ: ಸಿಎಂ ಜೊತೆ ಚರ್ಚಿಸಿ ಮಾರ್ಗಸೂಚಿ ಬಿಡುಗ...
Home Front Page ಕೋವಿಡ್ ಆತಂಕ ಹಿನ್ನೆಲೆ ಕಟ್ಟೆಚ್ಚರ: ಸಿಎಂ ಜೊತೆ ಚರ್ಚಿಸಿ ಮಾರ್ಗಸೂಚಿ ಬಿಡುಗಡೆ- ಆರೋಗ್ಯ ಸಚಿವ ಡಾ.ಕೆ.ಸುಧಾಕರ್.

ಕೋವಿಡ್ ಆತಂಕ ಹಿನ್ನೆಲೆ ಕಟ್ಟೆಚ್ಚರ: ಸಿಎಂ ಜೊತೆ ಚರ್ಚಿಸಿ ಮಾರ್ಗಸೂಚಿ ಬಿಡುಗಡೆ- ಆರೋಗ್ಯ ಸಚಿವ ಡಾ.ಕೆ.ಸುಧಾಕರ್.

ಬೆಳಗಾವಿ,ಡಿಸೆಂಬರ್,21,2022(www.justkannada.in):  ಚೀನಾ ಸೇರಿ ಹಲವು ದೇಶಗಳಲ್ಲಿ ಕೊರೋನಾ ಹೆಚ್ಚುತ್ತಿದ್ದು, ರಾಜ್ಯದಲ್ಲೂ ಕೋವಿಡ್ ಆತಂಕ ಶುರುವಾಗಿದೆ. ಈ ಹಿನ್ನೆಲೆಯಲ್ಲಿ  ಸಿಎಂ ಬಸವರಾಜ ಬೊಮ್ಮಾಯಿ ಅವರ ಜತೆ ಚರ್ಚಿಸಿ ಮಾರ್ಗಸೂಚಿ ಬಿಡುಗಡೆ ಮಾಡಲಾಗುತ್ತದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.

ಈ ಕುರಿತು ಇಂದು ಮಾತನಾಡಿದ ಸಚಿವ ಸುಧಾಕರ್, ಈಗಾಗಲೇ ಕೇಂದ್ರ ಆರೋಗ್ಯ ಸಚಿವರಿಗೆ ಪತ್ರ ಬರೆಯಲಾಗಿದೆ.  ರಾಜ್ಯದಲ್ಲಿ 3ನೇ ಡೋಸ್ ಗೆ ಹೆಚ್ಚಿನ ಮಹತ್ವ ನೀಡಲಾಗುತ್ತಿದೆ. ನಿನ್ನೆ ಮುಖ್ಯಕಾರ್ಯದರ್ಶಿ ಜೊತೆ ಸಭೆ ನಡೆಸಿದ್ದೇನೆ.  ಮುಂದಿನ ಕ್ರಮಗಳ ಬಗ್ಗೆ ಸಭೆ ನಡೆಸಿ ಚರ್ಚಿಸಲಾಗುತ್ತದೆ ಎಂದರು.ಕೋವಿಡ್ ಆತಂಕ ಹಿನ್ನೆಲೆ ಕಟ್ಟೆಚ್ಚರ sudhakar

ಜಿನೋಮಿಕ್ ಟೆಸ್ಟ್ ಗೆ ಸೂಚಿಸಿದ್ದೇನೆ. ಜನದಟ್ಟಣೆ ಇರುವ ಪ್ರದೇಶಗಳಲ್ಲಿ ಹೆಚ್ಚಿನ ನಿಗಾ ವಹಿಸಲಾಗುತ್ತದೆ.  ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕಟ್ಟೆಚ್ಚರ 3ನೇ ಡೋಸ್ ಲಸಿಕೆ ಪಡೆಯದವರ ಬಗ್ಗೆಯೂ ನಿಗಾ ವಹಿಸುತ್ತೇವೆ ಎಂದು ಸಚಿವ ಸುಧಾಕರ್ ತಿಳಿಸಿದರು.

Key words:  Covid -Discuss – CM – guidelines-Health Minister -Dr. K. Sudhakar