Friday, August 7, 2026

BDA Apartments

Home Front Page ಬೆಳಗಾವಿ ಗಡಿ ನುಗ್ಗಲು ಯತ್ನಿಸಿ ಪುಂಡಾಟ ಮೆರೆದ ಎಂಇಎಸ್, ಶಿವಸೇನೆ ಕಾರ್ಯಕರ್ತರು ಪೊಲೀಸರ ವಶಕ್ಕೆ.

ಬೆಳಗಾವಿ ಗಡಿ ನುಗ್ಗಲು ಯತ್ನಿಸಿ ಪುಂಡಾಟ ಮೆರೆದ ಎಂಇಎಸ್, ಶಿವಸೇನೆ ಕಾರ್ಯಕರ್ತರು ಪೊಲೀಸರ ವಶಕ್ಕೆ.

ಬೆಳಗಾವಿ,ಡಿಸೆಂಬರ್,19,2022(www.justkannada.in): ಒಂದೆಡೆ ಬೆಳಗಾವಿಯ ಸುವರ್ಣಸೌಧದಲ್ಲಿ ರಾಜ್ಯ ವಿಧಾನಮಂಡಲ ಅಧಿವೇಶನ ನಡೆಯುತ್ತಿದ್ದರೇ ಇನ್ನೊಂದಡೆ ಬೆಳಗಾವಿ ಗಡಿಯನ್ನು ಪ್ರವೇಶಿಸಲು ಯತ್ನಿಸಿ ಪುಂಡಾಟ ಮೆರೆದ ಎಂಇಎಸ್ ಶಿವಸೇನೆ ಪುಂಡರನ್ನ ಪೊಲೀಸರು ವಶಕ್ಕೆ ಪಡೆದರು.

ಈ ಬಾರಿ ಎಂಇಎಸ್  ಮಹಾಮೇಳವ್ ಗೆ ಬ್ರೇಕ್ ಹಾಕಿದ ಹಿನ್ನೆಲೆ ಎಂಇಎಸ್, ಶೀವಸೇನೆ, ಎನ್ ಸಿಪಿ ಕಾರ್ಯಕರ್ತರು ಬೆಳಗಾವಿ ಜಿಲ್ಲೆ ನಿಪ್ಪಾಣಿ ತಾಲ್ಲೂಕಿನ ಕೊಗನೊಳ್ಳಿ ಚೆಕ್ ಪೋಸ್ಟ್ ಬಳಿ ಗಡಿ ನುಗ್ಗಲು ಯತ್ನಿಸಿದರು.

ಈ ವೇಳೆ ಪೊಲೀಸರು ಮತ್ತು  ಶೀವಸೇನೆ, ಎಂಇಎಸ್ ಪುಂಡರ ನಡುವೆ ನೂಕಾಟ ತಳ್ಳಾಟ ನಡೆಯಿತು.  ಗಡಿ ಪ್ರವೇಶಿಸದಂತೆ ಕಾಗಲ್ ಠಾಣಾ ಪೊಲೀಸರು ಸೂಚಿಸಿದರೂ ಸಹ ಕ್ಯಾರೆ ಎನ್ನದೆ ನಾಡದ್ರೋಹಿ ಘೋಷಣೆ ಕೂಗಿ ಪುಂಡಾಟಿಕೆ ತೋರಿದರು. ಈ ವೇಳೆ ಶೀವಸೇನೆ, ಎಂಇಎಸ್ ಕಾರ್ಯಕರ್ತರನ್ನ ಪೊಲೀಸರು ವಶಕ್ಕೆ ಪಡೆದರು. ಈ ಮೂಲಕ ಮತ್ತೆ ಬಾಲಬಿಚ್ಚಿದ ಎಂಇಎಸ್ ಗೆ ತಕ್ಕ ಪಾಠ ಕಲಿಸಿದ್ದಾರೆ.

Key words: MES- Shiv Sena -activists – Belgaum -border Arrest