Wednesday, July 29, 2026

BDA Apartments

Home Front Page ಮಲ್ಲಿಕಾರ್ಜುನ ಖರ್ಗೆ ಸ್ವಾರ್ಥ ರಾಜಕಾರಣಿ: ಕೋಲಿ ಸಮಾಜದ ಮೀಸಲಾತಿಗೆ ಶ್ರಮಿಸಲಿಲ್ಲ- ಬಾಬೂರಾವ್ ಚಿಂಚನಸೂರು ಕಿಡಿ.

ಮಲ್ಲಿಕಾರ್ಜುನ ಖರ್ಗೆ ಸ್ವಾರ್ಥ ರಾಜಕಾರಣಿ: ಕೋಲಿ ಸಮಾಜದ ಮೀಸಲಾತಿಗೆ ಶ್ರಮಿಸಲಿಲ್ಲ- ಬಾಬೂರಾವ್ ಚಿಂಚನಸೂರು ಕಿಡಿ.

ಬೆಂಗಳೂರು,ಡಿಸೆಂಬರ್,13,2022(www.justkannada.in): ಮಲ್ಲಿಕಾರ್ಜುನ ಖರ್ಗೆ ಸ್ವಾರ್ಥ ರಾಜಕಾರಣಿ. ಮಗನ ಮೇಲಿನ ಪ್ರೀತಿಯಿಂದ ನನ್ನನ್ನು ಮಂತ್ರಿಸ್ಥಾನದಿಂದ ತೆಗೆದು ಪ್ರಿಯಾಂಕ್ ಖರ್ಗೆಯನ್ನ  ಸಚಿವರನ್ನಾಗಿ ಮಾಡಿದ್ರು ಎಂದು ವಿಧಾನಪರಿಷತ್ ಸದಸ್ಯ ಬಾಬೂರಾವ್ ಚಿಂಚನಸೂರ್ ಕಿಡಿಕಾರಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಎಂಎಲ್ ಸಿ ಬಾಬೂರಾವ್ ಚಿಂಚನಸೂರ್,  ಗುರುಮಠಕಲ್ ನಿಂದ 50 ವರ್ಷ ರಾಜಕಾರಣ ಮಾಡಿದರು. ಆದರೆ ಕೋಲಿ ಸಮಾಜದ ಮೀಸಲಾತಿಗೆ  ಮಲ್ಲಿಕಾರ್ಜುನ ಖರ್ಗೆ ಶ್ರಮಿಸಲಿಲ್ಲ. ಕೇಂದ್ರ ಸಚಿವರಾಗಿದ್ದಾಗ ಮೀಸಲಾತಿಗೆ ಶ್ರಮಿಸಬಹುದಿತ್ತು.  5 ನಿಮಿಷದಲ್ಲಿ ಎಸ್ ಟಿಗೆ ಸೇರಿಸಬಹುದಿತ್ತು. ಕೋಲಿ ಸಮುದಾಯಕ್ಕೆ ಖರ್ಗೆ ಅನ್ಯಾಯ ಮಾಡಿದ್ದಾರೆ. ಈಗ ತಳವಾರ ಸಮುದಾಯವನ್ನ ಎಸ್ಟಿ ಸಮುದಾಯಕ್ಕೆ ಸೇರಿಸಲಾಗಿದೆ ಎಂದರು.

ಕಾಂಗ್ರೆಸ್ ಮುಳುಗುತ್ತಿರುವ ಹಡಗು, ಸಿದ‍್ಧರಾಮಯ್ಯ ,ಡಿಕೆ ಶಿವಕುಮಾರ್ ಹಾವು ಮುಂಗುಸಿ ಇದ್ದಂತೆ. ಕಾಂಗ್ರೆಸ್ ಘಟಾನುಘಟಿ ನಾಯಕರೇ ಬಿಜೆಪಿಗೆ ಬರುತ್ತಿದ್ದಾರೆ ಎಂದು ಬಾಬೂರಾವ್ ಚಿಂಚನಸೂರ್ ವಾಗ್ದಾಳಿ ನಡೆಸಿದರು.

Key words: Mallikarjuna Kharge -Selfish –Politician-MLC-  Chinchansur Baburao