Thursday, August 6, 2026

BDA Apartments

Home Front Page ಸಿಎಂ ಬೊಮ್ಮಾಯಿ ಬದಲಾಗಿಲ್ಲ, ಇದ್ಧ ಮನೆಯಲ್ಲೇ ಇದ್ದಾರೆ- ಸಚಿವ ಆರ್.ಅಶೋಕ್ ಗುಣಗಾನ.

ಸಿಎಂ ಬೊಮ್ಮಾಯಿ ಬದಲಾಗಿಲ್ಲ, ಇದ್ಧ ಮನೆಯಲ್ಲೇ ಇದ್ದಾರೆ- ಸಚಿವ ಆರ್.ಅಶೋಕ್ ಗುಣಗಾನ.

ಚಾಮರಾಜನಗರ,ಡಿಸೆಂಬರ್,13,2022(www.justkannada.in):  ಸಿಎಂ ಬಸವರಾಜ ಬೊಮ್ಮಾಯಿ ಬದಲಾಗಿಲ್ಲ. ಇದ್ದ ಮನೆಯಲ್ಲೇ ಇದ್ದಾರೆ. ಸಿಎಂ ಆದ ಬಳಿಕ ಅವರು ಹೊಸ ಮನೆ ಕಟ್ಟಿಸಿಕೊಂಡಿಲ್ಲ. ಅವರು ಜನಸಾಮಾನ್ಯರ ಮುಖ್ಯಮಂತ್ರಿ ಎಂದು  ಕಂದಾಯ ಸಚಿವ ಆರ್.ಅಶೋಕ್ ಗುಣಗಾನ ಮಾಡಿದರು.

ಚಾಮರಾಜನಗರದಲ್ಲಿ ಇಂದು ಮಾತನಾಡಿದ ಸಚಿವ ಆರ್.ಅಶೋಕ್, ಸಿಎಂ ಆದವರು ಚಾಮರಾಜನಗರಕ್ಕೆ ಬರಲ್ಲ ಅಂತಿದ್ರು. ಆದರೆ ನಮ್ಮ ಸಿಎಂ ಬಸವರಾಜ ಬೊಮ್ಮಾಯಿ ಅವರು ಚಾಮರಾಜನಗರಕ್ಕೆ ಎರಡು ಬಾರಿ ಬಂದಿದ್ದಾರೆ. ಯಾರೂ ಚಾಮರಾಜನಗರಕ್ಕೆ ಬರಲ್ಲ ಎಂದು ಹೇಳಬಾರದು ಎಂದರು.kpcc-president-dk-shivakumar-function-minister-r-ashok

ಸಿಎಂ ಬಸವರಾಜ ಬೊಮ್ಮಾಯಿ ಅವರು, ಎಸ್.ಸಿ ಮತ್ತು ಎಸ್ ಟಿ ಸಮುದಾಯಕ್ಕೆ ಮೀಸಲಾತಿ ನೀಡಿದರು. ಜೇನುಗೂಡಿಗೆ ಕಲ್ಲು ಹೊಡೆಯಬೇಡಿ ಅಂದರು. ಆದರೆ ಸಿಎಂ ಧೈರ್ಯ ಮಾಡಿ ಕಲ್ಲು ಹೊಡೆದರು ಎಂದರು.

ಇದೇ ವೇಳೆ ಸಚಿವ ವಿ.ಸೋಮಣ್ಣ ಅವರನ್ನ ಹೊಗಳಿದ ಸಚಿವ ಆರ್.ಅಶೋಕ್,  ಸಚಿವ ಸೋಮಣ್ಣ ಸಿಎಂ  ಮರಳು ಮಾಡಿ ಅಭಿವೃದ್ದಿಗೆ ಹಣ ತಂದರು.  ಡಬಲ್ ಇಂಜಿನ್ ಆಗಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದರು.

Key words: CM Bommai – not –changed – Minister -R. Ashok