Sunday, September 13, 2026

BDA Apartments

ಮೆಗಾಸ್ಟಾರ್ ಚಿರಂಜೀವಿ ‘ಸೈರಾ’ ಚಿತ್ರಕ್ಕಾಗಿ ಒಂದಾದ ಸುದೀಪ್-ಯಶ್ ! BDA JK_Adv BDA Adv
Home Cinema ಮೆಗಾಸ್ಟಾರ್ ಚಿರಂಜೀವಿ ‘ಸೈರಾ’ ಚಿತ್ರಕ್ಕಾಗಿ ಒಂದಾದ ಸುದೀಪ್-ಯಶ್ !

ಮೆಗಾಸ್ಟಾರ್ ಚಿರಂಜೀವಿ ‘ಸೈರಾ’ ಚಿತ್ರಕ್ಕಾಗಿ ಒಂದಾದ ಸುದೀಪ್-ಯಶ್ !

ಬೆಂಗಳೂರು, ಆಗಸ್ಟ್20, 2019 (www.justkannada.in): ಕಿಚ್ಚ ಸುದೀಪ್ ಮತ್ತು ರಾಕಿಂಗ್ ಸ್ಟಾರ್ ಯಶ್ ಇಬ್ಬರನ್ನು ಒಂದೇ ಚಿತ್ರದಲ್ಲಿ ನೋಡುವ ಅವಕಾಶ ಅಭಿಮಾನಿಗಳಿಗೆ ಸಿಗದಿದ್ದರೂ ಇದೀಗ ಇಬ್ಬರು ಸ್ಟಾರ್ ಗಳ ಧ್ವನಿಯನ್ನು ಒಂದೇ ಚಿತ್ರದಲ್ಲಿ ಕೇಳಬಹುದಾಗಿದೆ.

ಮೆಗಾಸ್ಟಾರ್ ಚಿರಂಜೀವಿ ಅಭಿನಯದ 151ನೇ ಚಿತ್ರ ‘ಸೈರಾ ನರಸಿಂಹ ರೆಡ್ಡಿ’ ಬಹು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ ನಟ ಸುದೀಪ್ ನಟಿಸಿದ್ದರೆ, ಕನ್ನಡ ಅವತರಣಿಕೆಗೆ ಯಶ್ ಧ್ವನಿ ನೀಡಲಿದ್ದಾರೆ.

ಈಗಾಗಲೇ ಚಿತ್ರೀಕರಣ ಪೂರ್ಣಗೊಂಡಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆದಿವೆ. ಚಿತ್ರದ ಟೀಸರ್ 4 ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದ್ದು, 4 ಭಾಷೆಗಳ ಸ್ಟಾರ್ ನಟರು ಡಬ್ಬಿಂಗ್ ಗೆ ಧ್ವನಿ ನೀಡಿದ್ದಾರೆ.

‘ಸೈರಾ ನರಸಿಂಹ ರೆಡ್ಡಿ’ ಕನ್ನಡ ಟೀಸರ್ ಗೆ ರಾಕಿಂಗ್ ಸ್ಟಾರ್ ಯಶ್ ಧ್ವನಿ ನೀಡಿದ್ದಾರೆ. ತೆಲುಗಿನಲ್ಲಿ ಪವರ್ ಸ್ಟಾರ್ ಪವನ್ ಕಲ್ಯಾಣ್, ತಮಿಳಿನಲ್ಲಿ ಸೂಪರ್ ಸ್ಟಾರ್ ರಜನಿಕಾಂತ್, ಮಲಯಾಳಂ ಟೀಸರ್ ಗೆ ಸೂಪರ್ ಸ್ಟಾರ್ ಮೋಹನ್ ಲಾಲ್ ಧ್ವನಿ ನೀಡಿದ್ದಾರೆ.