Monday, August 10, 2026

BDA Apartments

Home Front Page ಕಾಂಗ್ರೆಸ್ ಅವಧಿಯಲ್ಲೇ ರೌಡಿಗಳು ಬೆಳೆದಿದ್ದಾರೆ: ಗೂಂಡಾ ರಾಜಕಾರಣ ನಮ್ಮಲ್ಲಿಲ್ಲ- ಸಚಿವ ಆರ್.ಅಶೋಕ್.

ಕಾಂಗ್ರೆಸ್ ಅವಧಿಯಲ್ಲೇ ರೌಡಿಗಳು ಬೆಳೆದಿದ್ದಾರೆ: ಗೂಂಡಾ ರಾಜಕಾರಣ ನಮ್ಮಲ್ಲಿಲ್ಲ- ಸಚಿವ ಆರ್.ಅಶೋಕ್.

ಬೆಂಗಳೂರು,ಡಿಸೆಂಬರ್,2,2022(www.justkannada.in):  ಕಾಂಗ್ರೆಸ್ ರೌಡಿಗಳನ್ನು ತಯಾರಿಸುವ ಕಾರ್ಖಾನೆ. ಕಾಂಗ್ರೆಸ್ ಅವಧಿಯಲ್ಲೇ ರೌಡಿಗಳು ಬೆಳೆದಿದ್ದಾರೆ ಎಂದು ಕಂದಾಯ ಸಚಿವ ಆರ್.ಅಶೋಕ್ ಆರೋಪಿಸಿದರು.

ಸಚಿವ ಸೋಮಣ್ಣ ನಿವಾಸಕ್ಕೆ ರೌಡಿಶೀಟರ್ ಭೇಟಿ ಪ್ರಕರಣ ಕುರಿತು ಮಾತನಾಡಿದ ಸಚಿವ ಆರ್.ಅಶೋಕ್,  ಈಗಾಗಲೇ ಸೋಮಣ್ಣ ಒಳ್ಳೇಯ ಸ್ಪಷ್ಟನೆ ನೀಡಿದ್ದಾರೆ.  ಸೋಮಣ್ಣಗೆ ಅಂಥಾ ರಾಜಕೀಯ ಹಿನ್ನೆಲೆ ಇಲ್ಲ. ಅವರು ಬಸವತತ್ವದ ಆಧಾರದ ಮೇಲೆ ಇರುವವರು ಎಂದರು.kpcc-president-dk-shivakumar-function-minister-r-ashok

ಕಾಂಗ್ರೆಸ್ ನಂತೆ ನಾವು ಗೂಂಡಾ ರಾಜಕಾರಣ ಮಾಡಲ್ಲ. ಫೈಟರ್ ರವಿ ಬಿಜೆಪಿ ಸೇರಿದ್ದು ಗಮನಕ್ಕೆ ಬಂದಿಲ್ಲ. ರೌಡಿಗಳಿಗೆ ಬಿಜೆಪಿಯಲ್ಲಿ ಅವಕಾಶವಿಲ್ಲ.  ಅಂತಹ ಪ್ರಕರಣಗಳಿದ್ದರೇ ಪಕ್ಷದ  ಅಧ್ಯಕ್ಷರಿಂದ ಕ್ರಮ ಎಂದು ಸಚಿವ ಆರ್.ಅಶೋಕ್ ತಿಳಿಸಿದರು.

Key words: Rowdies – grown – Congress- Minister -R. Ashok.