ಕನ್ನಡ ಬಾವುಟ ಹಾರಿಸಿದ ವಿದ್ಯಾರ್ಥಿ ಮೇಲೆ ಹಲ್ಲೆ ಪ್ರಕರಣ ತನಿಖೆಗೆ ಸೂಚನೆ- ಸಿಎಂ ಬೊಮ್ಮಾಯಿ.

ಬೆಂಗಳೂರು,ಡಿಸೆಂಬರ್,2,2022(www.justkannada.in): ಕನ್ನಡ ಬಾವುಟ ಹಾರಿಸಿದ ವಿದ್ಯಾರ್ಥಿ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ  ತನಿಖೆಗೆ ಸೂಚನೆ ನೀಡಲಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಈ ಕುರಿತು ಮಾತನಾಡಿದ ಸಿಎಂ ಬಸವರಜ ಬೊಮ್ಮಾಯಿ,  ಯಾರೇ ತಪ್ಪು ಮಾಡಿದರೂ ಕ್ರಮ ಕೈಗೊಳ್ಳಲಾಗುತ್ತದೆ.  ಪೊಲೀಸರು ಯುವಕನ ಮೇಲೆ ಹಲ್ಲೆ ಮಾಡಿಲ್ಲ ಎಂದಿದ್ದಾರೆ.  ಮಹಾರಾಷ್ಟ್ರದವರು ಅನಗತ್ಯವಾಗಿ ವಿವಾದ ಮಾಡುತಿದ್ದಾರೆ ಎಂದು ಹೇಳಿದರು.

ಅಲ್ಪಸಂಖ್ಯಾತ ಮತದಾರರ  ಹೆಸರು ಡಿಲಿಟ್ ಮಾಡಿದ್ದಾರೆಂಬ ಆರೋಪ ಸುಳ್ಳು. ಈ ಕುರಿತು ಚುನಾವಣಾ ಆಯೋಗ ಗಮನಿಸಿದೆ.  ದೂರು ಬಂದಕಡೆ ಕ್ರಮ ಕೈಗೊಳ್ಳಲು ಹೇಳಿದ್ದೇವೆ. ಅನಧಿಕೃತ ಮತದಾರರನ್ನ ತೆಗೆದು ಹಾಕಲಾಗಿದೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.

Key words:  investigate – assault – student – hoisted – Kannada flag- CM Bommai.