Saturday, September 19, 2026

BDA Apartments

ಇದು 80% ಪರ್ಸೆಂಟ್ ಸರ್ಕಾರ: ಉದ್ದೇಶಪೂರ್ವಕವಾಗಿ ನಮ್ಮ ಅವಧಿ ಕಾಮಗಾರಿಗಳಿಗೆ ತಡ...
Home Front Page ಇದು 80% ಪರ್ಸೆಂಟ್ ಸರ್ಕಾರ: ಉದ್ದೇಶಪೂರ್ವಕವಾಗಿ ನಮ್ಮ ಅವಧಿ ಕಾಮಗಾರಿಗಳಿಗೆ ತಡೆ- ನಳೀನ್ ಕುಮಾರ್ ಕಟೀಲ್.

ಇದು 80% ಪರ್ಸೆಂಟ್ ಸರ್ಕಾರ: ಉದ್ದೇಶಪೂರ್ವಕವಾಗಿ ನಮ್ಮ ಅವಧಿ ಕಾಮಗಾರಿಗಳಿಗೆ ತಡೆ- ನಳೀನ್ ಕುಮಾರ್ ಕಟೀಲ್.

 ಮಂಗಳೂರು,ಮೇ,26,2023(www.justkannada.in): ಕಾಂಗ್ರೆಸ್ ಸರ್ಕಾರ ಉದ್ಧೇಶಪೂರ್ವಕವಾಗಿ ನಮ್ಮ ಅವಧಿಯ ಕಾಮಗಾರಿಗಳಿಗೆ ತಡೆ ನೀಡುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಆರೋಪಿಸಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ನಳೀನ್ ಕುಮಾರ್ ಕಟೀಲ್, ಇದು 80% ಪರ್ಸೆಂಟ್​ ಪಡೆಯುವ ಸರ್ಕಾರ. ನಮ್ಮ ವಿರುದ್ಧ ಕಾಂಗ್ರೆಸ್ ​​ನವರು ಭ್ರಷ್ಟಾಚಾರ ಆರೋಪ ಮಾಡಿದ್ದಾರೆ. ನಮ್ಮ ಅವಧಿಯಲ್ಲಿ ಭ್ರಷ್ಟಾಚಾರ ಆಗಿದ್ದರೆ ತನಿಖೆ ನಡೆಸಲಿ. ಹಿಂದಿನ ಎಲ್ಲ ಸರ್ಕಾರಗಳ ಭ್ರಷ್ಟಾಚಾರದ ಬಗ್ಗೆ ತನಿಖೆ ನಡೆಸಲಿ ಎಂದು ತಿರುಗೇಟು ನೀಡಿದ್ದಾರೆ.ಇದು 80% ಪರ್ಸೆಂಟ್ ಸರ್ಕಾರ nalin

ಇನ್ನು ನಾವು ಜಾರಿ ಮಾಡಿರುವ ಕಾಮಗಾರಿಗಳನ್ನ ಉದ್ಧೇಶಪೂರ್ವಕವಾಗಿ ಕಾಂಗ್ರೆಸ್ ಸರ್ಕಾರ ತಡೆಹಿಡಿಯುತ್ತಿದೆ ಎಂದು ಕಟೀಲ್  ಕಿಡಿಕಾರಿದರು.

Key words:  80% percent –congress Govt-bjp-president-Naleen Kumar Kateel.