Tuesday, August 11, 2026

BDA Apartments

Home Front Page 75ನೇ ಮನ್ ಕೀ ಬಾತ್ ಸಂಭ್ರಮ! ಕೇಳುಗರಿಗೆ ಧನ್ಯವಾದ ಹೇಳಿದ ಮೋದಿ

75ನೇ ಮನ್ ಕೀ ಬಾತ್ ಸಂಭ್ರಮ! ಕೇಳುಗರಿಗೆ ಧನ್ಯವಾದ ಹೇಳಿದ ಮೋದಿ

ಬೆಂಗಳೂರು, ಮಾರ್ಚ್ 28, 2021 (www.justkannada.in): ಪ್ರಧಾನಿ ನರೇಂದ್ರ ಮೋದಿ ಇಂದು 75ನೇ ಮನ್ ಕೀ ಬಾತ್ ನಲ್ಲಿ ಪಾಲ್ಗೊಂಡು ಕೇಳುಗರಿಗೆ ಧನ್ಯವಾದ ಅರ್ಪಿಸಿದ್ದಾರೆ.

‘ಮನ್ ಕೀ ಬಾತ್’ ತಿಂಗಳ ರೇಡಿಯೋ ಕಾರ್ಯಕ್ರಮದ ಮೂಲಕ ದೇಶವನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಇದು ಅವೃತ್ತಿಯ 75ನೇ ಕಾರ್ಯಕ್ರಮವಾಗಿದೆ ಎಂದು ಸ್ಮರಿಸಿದರು.

ಮನ್ ಕಿ ಬಾತ್ ವಿಚಾರ ಯಾತ್ರೆಯಲ್ಲಿ ಹಲವಾರು ಮಂದಿ ಪಾಲ್ಗೊಂಡಿದ್ದಾರೆ. ಜತೆಗೆ ಕೋಟ್ಯಂತರ ಕೇಳುಗಳು ಕಿವಿಯಾಗಿದ್ದಾರೆ. ಎಲ್ಲಾ ಕೇಳುಗರಿಗೂ ನಾನು ಧನ್ಯವಾದ ಅರ್ಪಿಸುತ್ತೇನೆ ಎಂದಿದ್ದಾರೆ.

ನಾವು ಸ್ವಾತಂತ್ರ್ಯ ಸಂಗ್ರಾಮದ ಅಮೃತ ಮಹೋತ್ಸವ ಆಚರಿಸುತ್ತಿದ್ದೇವೆ. ದೇಶದ ವಿವಿಧ ಪ್ರದೇಶಗಳಲ್ಲಿ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಮೋದಿ ಮಾಹಿತಿ ನೀಡಿದ್ದಾರೆ.