ಪವರ್ ಸ್ಟಾರ್ ಅಪ್ಪು ವರ್ಕೌಟ್ ವಿಡೀಯೋ ಮೆಚ್ಚಿದ ಕ್ಯಾಪ್ಟನ್ ಕೂಲ್ ಧೋನಿ!

ಬೆಂಗಳೂರು, ಮಾರ್ಚ್ 28, 2021 (www.justkannada.in): ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ವರ್ಕೌಟ್ ಬಗ್ಗೆ ಕ್ಯಾಪ್ಟನ್ ಕೂಲ್ ಧೋನಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಈ ವಿಚಾರವನ್ನು ನಿರ್ದೇಶಕ ಸಂತೋಷ್ ಆನಂದ್ ರಾಮ್ ಹಂಚಿಕೊಂಡಿದ್ದಾರೆ. ಈ ಕುರಿತ ಸಂತೋಷ್ ರಾಮ್ ಹಂಚಿಕೊಂಡಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಕೂಡ ಆಗಿದೆ.

ಅಂದಹಾಗೆ ಈ ವಿಷಯ ಹೊರ ಬರಲು ಕಾರಣ ಕೂಡ ಇದೆ. ಯುವರತ್ನ ಚಿತ್ರ ಬಿಡುಗಡೆ ಕುರಿತ ಸುದ್ದಿ ವಾಹಿನಿ ಸಂದರ್ಶನದಲ್ಲಿ ಈ ವಿಷಯವನ್ನು ಸಂತೋಷ್ ರಾಮ್ ಹೇಳಿದ್ದಾರೆ.

ಪುನೀತ್ ರಾಜ್ ಕುಮಾರ್ ಅವರ ವರ್ಕೌಟ್ ವಿಡಿಯೋ ನೋಡಿದ ಧೋನಿ ಮೆಚ್ಚುಗೆ ವ್ಯಕ್ತಪಡಿಸಿದ್ದರು ಎಂಬ ವಿಚಾರವನ್ನು ಸಂತೋಷ್ ಹಂಚಿಕೊಂಡಿದ್ದಾರೆ.