Sunday, August 2, 2026

BDA Apartments

Home Front Page 15 ವರ್ಷ ಪೂರ್ಣಗೊಂಡ 5000 ಸರ್ಕಾರಿ ವಾಹನ ಗುಜರಿಗೆ ಹಾಕಲು ಆದೇಶ

15 ವರ್ಷ ಪೂರ್ಣಗೊಂಡ 5000 ಸರ್ಕಾರಿ ವಾಹನ ಗುಜರಿಗೆ ಹಾಕಲು ಆದೇಶ

ಬೆಂಗಳೂರು, ಸೆಪ್ಟೆಂಬರ್ 30, 2023 (www.justkannada.in): 15 ವರ್ಷ ಪೂರ್ಣಗೊಂಡ ಸರ್ಕಾರಿ ವಾಹನಗಳನ್ನು ಗುಜರಿಗೆ ಹಾಕಲು ಅನುಮತಿ ನೀಡಿ ಆದೇಶಿಸಲಾಗಿದೆ.

ಹೌದು. 5 ವರ್ಷ ಪೂರ್ಣಗೊಂಡ 5000 ಸರ್ಕಾರಿ ವಾಹನಗಳ ಗುಜರಿಗೆ ಹಾಕಲು ಸಾರಿಗೆ ಇಲಾಖೆ ಅನುಮೋದನೆ ನೀಡಿ ಆದೇಶಿಸಿದೆ. 15 ವರ್ಷ ಪೂರ್ಣಗೊಂಡ 5000 ವಾಹನಗಳನ್ನು ನಾಶಪಡಿಸಲು ಸರ್ಕಾರದಿಂದ ಅನುಮತಿ ನೀಡಲಾಗಿದೆ.

ಅತಿ ಹೆಚ್ಚು ವರ್ಷಗಳನ್ನು ಪೂರ್ಣಗೊಳಿಸಿದ ವಾಹನಗಳನ್ನು ಮೊದಲು ನಾಶ ಮಾಡಲು ಆದ್ಯತೆ ನೀಡಬೇಕು ಎಂದು ತಿಳಿಸಲಾಗಿದೆ.

ಒಂದು ವರ್ಷದಲ್ಲಿ ಸಾರಿಗೆ ಇಲಾಖೆಯ ಶಾಸನದ ಕ್ರಮದಡಿ ದಾಖಲಾದ ಪ್ರಕರಣದ ದಂಡಗಳು ಮತ್ತು ಪೊಲೀಸ್ ಇಲಾಖೆಯ ಸಂಚಾರ ನಿಯಮ ಉಲ್ಲಂಘನೆ ಅಡಿ ದಾಖಲಾದ ಪ್ರಕರಣಗಳಿಗೆ ಸೀಮಿತಗೊಳಿಸಿ ದಂಡಗಳ ವಸೂಲಾತಿಯಿಂದ ವಿನಾಯಿತಿ ನೀಡಲಾಗಿದೆ.