ಎಸ್.ವಿ.ಪಿ, ಬಿ ಪ್ಯಾಕ್‌ನಿಂದ 40 ಥರ್ಮಲ್ ಸ್ಕ್ಯಾನಿಂಗ್ ಯಂತ್ರ, ಪೇಸ್ ಶೀಲ್ಡ್ ಹಸ್ತಾಂತರ

ಬೆಂಗಳೂರು: ಕೊವಿಡ್-೧೯ ಹಿನ್ನೆಲೆ ಪಾಲಿಕೆ ಕೇಂದ್ರ ಕಛೇರಿಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಯ ಆರೋಗ್ಯ ತಪಾಸಣೆ ಮಾಡುವ ಉದ್ದೇಶದಿಂದ ಎಸ್.ವಿ.ಪಿ ಹಾಗೂ ಬಿ ಪ್ಯಾಕ್ ವತಿಯಿಂದ ಉಚಿತವಾಗಿ 40 ಥರ್ಮಲ್ ಸ್ಕ್ಯಾನಿಂಗ್ ಯಂತ್ರಗಳು ಹಾಗೂ 50 ಪೇಸ್ ಶೀಲ್ಡ್ ಗಳನ್ನು ಪಾಲಿಕೆ ಕೇಂದ್ರ ಕಛೇರಿ ಮಹಾಪೌರರು ಕೊಠಡಿಯಲ್ಲಿ ಹಸ್ತಾಂತರಿಸಲಾಯಿತು.

ಈ ವೇಳೆ ಉಪಮಹಾಪೌರರು ರಾಮಮೋಹನ ರಾಜು, ಮುಖ್ಯ ಆರೋಗ್ಯಾಕಾರಿ(ಕ್ಲಿನಿಕಲ್) ಡಾ. ನಿರ್ಮಲಾ ಬುಗ್ಗಿ, ಘನತ್ಯಾಜ್ಯ ವಿಭಾಗದ ಜಂಟಿ ಆಯುಕ್ತರು ಶ್ರೀ ಸರ್ಫರಾಜ್ ಖಾನ್, ಬಿ ಪ್ಯಾಕ್ ಸಿ.ಇ.ಒ ಶ್ರೀಮತಿ ರೇವತಿ ಅಶೋಕ್, ಎಸ್.ವಿ.ಪಿಯ ಮ್ಯಾನೇಜ್ಮೆಂಟ್ ಕಮಿಟಿಯ ಪದ್ಮಶ್ರೀ ಬಲರಾಮ್ ಇತರರು ಉಪಸ್ಥಿತರಿದ್ದರು.

ಕೋವಿಡ್-೧೯ ಹಿನ್ನೆಲೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಪಾಲಿಕೆಯು ಈಗಾಗಲೇ ಹಲವಾರು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಪಾಲಿಕೆಯ ಜೊತೆಗೆ ಹಲವಾರು ಸಂಘಸಂಸ್ಥೆಗಳು ಕೈಜೋಡಿಸಿ ಸಹಕಾರ ನೀಡುತ್ತಿವೆ. ಅದರಂತೆ ಇಂದು ಎಸ್.ವಿ.ಪಿಮತ್ತು ಬಿ ಪ್ಯಾಕ್ ವತಿಯಿಂದ ಉಚಿತವಾಗಿ ಸ್ಕ್ಯಾನಿಂಗ್ ಥರ್ಮಲ್ ಸ್ಕ್ಯಾನಿಂಗ್ ಯಂತ್ರಗಳು ಹಾಗೂ ೫೦ ಪೇಸ್ ಶೀಲ್ಡ್ ಗಳನ್ನು ನೀಡಿವೆ ಎಂದು ಮೇಯರ್ ತಿಳಿಸಿದರು.