ಕೊರೊನಾ ಕರ್ತವ್ಯಗಳಿಗೆ 55 ವರ್ಷ ಮೇಲ್ಪಟ್ಟ ಪೊಲೀಸ್ ಸಿಬ್ಬಂದಿ ‌ನಿಯೋಜಿಸಬಾರದು: ಡಿಜಿ- ಐಜಿಪಿ ಪ್ರವೀಣ್ ಸೂದ್ ಆದೇಶ

ಬೆಂಗಳೂರು : ಕೊರೊನಾ ಕರ್ತವ್ಯ ಗಳಿಗೆ 55 ವರ್ಷ ಮೇಲ್ಪಟ್ಟ ಪೊಲೀಸ್ ಸಿಬ್ಬಂದಿಯನ್ನುನಿಯೋಜಿಸಬಾರದು ಎಂದು ರಾಜ್ಯ ಪೊಲೀಸ್ ಮಹಾನಿದೇಶಕ (ಡಿಜಿಐಜಿಪಿ) ಪ್ರವೀಣ್ ಸೂದ್ ಅವರು ಆದೇಶ ಹೊರಡಿಸಿದ್ದಾರೆ.

ಮಧುಮೇಹ, ರಕ್ತ ದೊತ್ತಡ, ಅಸ್ತಮಾ, ಕಿಡ್ನಿ ಹಾಗೂ ಯಕೃತ್ ಸಮಸ್ಯೆ, ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ಸಿಬ್ಬಂದಿಯನ್ನು ಕೂಡ ಆರೋಗ್ಯ ದೃಷ್ಟಿ ಯಿಂದ ರಸ್ತೆ ಮೇಲಿನ ಕರ್ತವ್ಯಗಳಿಗೆ ನಿಯೋಜಿಸ ಬಾರದು. ಪೊಲೀಸ್ ಠಾಣೆಯ ಒಳಗೆ ಅಥವಾ ಸುರಕ್ಷಿತ ಸ್ಥಳಗಳಲ್ಲಿ ಕರ್ತವ್ಯಕ್ಕೆ ಹಾಕಬೇಕು ಎಂದು ಪ್ರವೀಣ್ ಸೂದ್ ಆದೇಶದಲ್ಲಿ ತಿಳಿಸಿದ್ದಾರೆ.

ವಯಸ್ಸಾದವರನ್ನು ಹಾಗೂ ಕಾಯಿಲೆ ಇರುವವರನ್ನ ಕೋವಿಡ್ ಬಾಧಿಸುತ್ತದೆ. ಸಿಬ್ಬಂದಿಯ ಆರೋಗ್ಯ ಕಾಪಾಡುವುದು ನಮ್ಮ ಕೆಲಸವಾಗಿದೆಹೀಗಾಗಿ 55 ವರ್ಷ ಮೇಲ್ಪಟ್ಟವರನ್ನ ರಸ್ತೆ, ಚೆಕ್ ಪೋಸ್ಟ್ ಗಳಲ್ಲಿ ಕೋವಿಡ್ ಕರ್ತವ್ಯಕ್ಕೆ ಹಾಕಬಾರದು. ಸ್ಟೇಷನ್ ಒಳಗೆ ಅಥವಾ ಸುರಕ್ಷಿತ ಸ್ಥಳಗಳಲ್ಲಿ ಡ್ಯೂಟಿ ಒದಗಿಸಬೇಕು ಎಂದು ರಾಜ್ಯದ ಎಲ್ಲಾ ಪೊಲೀಸ್ ಠಾಣೆಯ ಹಿರಿಯ ಅಧಿಕಾರಿಗಳಿಗೆ ಸೂಚನೆ ಸೂದ್ ತಿಳಿಸಿದ್ದಾರೆ.