Thursday, August 6, 2026

BDA Apartments

Home Front Page 3ನೇ ಟೆಸ್ಟ್: ಥರ್ಡ್ ಅಂಪೈರ್ ವಿರುದ್ಧ ಇಂಗ್ಲೆಂಡ್ ದೂರು

3ನೇ ಟೆಸ್ಟ್: ಥರ್ಡ್ ಅಂಪೈರ್ ವಿರುದ್ಧ ಇಂಗ್ಲೆಂಡ್ ದೂರು

ಅಹ್ಮದಾಬಾದ್, ಫೆಬ್ರವರಿ 25, 2021 (www.justkannada.in): ಮೂರನೇ ಟೆಸ್ಟ್ ವೇಳೆ ಇಂಗ್ಲೆಂಡ್ 3ನೇ ಅಂಪೈರ್ ಬಗ್ಗೆ ಮ್ಯಾಚ್ ರೆಫ್ರಿಗೆ ದೂರು ನೀಡಿದೆ.

ವಿಶ್ವದ ಅತೀ ದೊಡ್ಡ ಕ್ರಿಕೆಟ್ ಮೈದಾನವಾದ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಆರಂಭವಾದ 3ನೇ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ  ಮ್ಯಾಚ್ ರೆಫ್ರಿ ಜಾವಗಲ್ ಶ್ರೀನಾಥ್ ಅವರಿಗೆ ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್ ಮತ್ತು ಕೋಚ್ ಸಿಲ್ವರ್ವುಡ್ ದೂರು ನೀಡಿದ್ದಾರೆ.

ಭಾರತದ ಆರಂಭಿಕ ಆಟಗಾರ ಶುಭ್ಮನ್ ಗಿಲ್ ಅವರು ಬೆನ್ ಸ್ಟೋಕ್ಸ್ ಬೌಲಿಂಗ್ ನಲ್ಲಿ ಸ್ಟುವರ್ಟ್ ಬ್ರಾಡ್ ಗೆ ಕ್ಯಾಚ್ ನೀಡಿದ್ದರು.

ಮೂರನೇ ಅಂಪಾಯರ್ ಚೆಂಡು ನೆಲಕ್ಕೆ ತಾಗಿರುವುದಾಗಿ ಹೇಳಿದ್ದರು. ರೋಹಿತ್ ಶರ್ಮಾ ಸರಿಯಾದ ಸಮಯದಲ್ಲಿ ಕಾಲನ್ನು ಕ್ರೀಸಿನಲ್ಲಿಟ್ಟ ಕಾರಣದಿಂದಾಗಿ ಬೆನ್ ಫೋಕ್ಸ್ ಗೆ ವಿಕೆಟ್ ಲಭ್ಯವಾಗಲಿಲ್ಲ.

ಈ ಎರಡು ನಿರ್ಧಾರಗಳನ್ನು ಹೆಚ್ಚು ಕ್ಯಾಮರಾ ನೆರವು ಪಡೆಯದೆ ಅವಸರದಲ್ಲಿ ತೆಗೆದುಕೊಳ್ಳಲಾಗಿದೆ ಎಂದು ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್ ಮತ್ತು ಕೋಚ್ ಸಿಲ್ವರ್ವುಡ್ ದೂರು ನೀಡಿದ್ದಾರೆ.