Monday, August 3, 2026

BDA Apartments

Home Front Page ಪಿರಿಯಾಪಟ್ಟಣ ಶಾಸಕ‌ ಮಹದೇವ್ ಗೆ 30 ಕೋಟಿ ಆಫರ್ ವಿಚಾರ: ಅಪಹಾಸ್ಯ ಮಾಡಿ ನಕ್ಕ ಸಚಿವ...

ಪಿರಿಯಾಪಟ್ಟಣ ಶಾಸಕ‌ ಮಹದೇವ್ ಗೆ 30 ಕೋಟಿ ಆಫರ್ ವಿಚಾರ: ಅಪಹಾಸ್ಯ ಮಾಡಿ ನಕ್ಕ ಸಚಿವ ಜಿ.ಟಿಡಿ ಮತ್ತು ಬಿಜೆಪಿ ಶಾಸಕರು..

ಮೈಸೂರು,ಜು,4,2019(www.justkannada.in): ಪಿರಿಯಾಪಟ್ಟಣ ಶಾಸಕ‌ ಮಹದೇವ್  ಬಿಜೆಪಿಯಿಂದ ನನಗೆ 30 ಕೋಟಿ ಆಫರ್  ಬಂದಿತ್ತು ಎಂದು ನೀಡಿದ್ದ ಹೇಳಿಕೆ ಕುರಿತು ಸಚಿವ ಜಿ.ಟಿ ದೇವೇಗೌಡ ಮತ್ತು ಬಿಜೆಪಿ ಶಾಸಕರಾದ ಎಸ್.ಎ ರಾಮದಾಸ್, ಎಲ್. ನಾಗೇಂದ್ರ ಗೇಲಿ ಮಾಡಿ ನಕ್ಕಿದ ಘಟನೆ ನಡೆಯಿತು.

ಮೈಸೂರಿನ ಜೆಕೆ ಮೈದಾನದಲ್ಲಿ ಇಂದು ಜನಸ್ಪಂದನಾ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಸಚಿವ ಜಿ.ಟಿ ದೇವೇಗೌಡ , ಬಿಜೆಪಿ ಶಾಸಕರಾದ ರಾಮದಾಸ್ ಹಾಗೂ ನಾಗೇಂದ್ರ ಪಾಲ್ಗೊಂಡಿದ್ದರು. ಈ ವೇಳೆ  ಒಂದೆ ವೇದಿಕೆಯಲ್ಲಿ ಗುಂಪು ಚರ್ಚೆ ಮಾಡಿ ಶಾಸಕ ಮಹದೇವ್ ಅವರ 30 ಕೋಟಿ ಆಫರ್  ವಿಚಾರವನ್ನ ಅಲ್ಲೆಗಳೆದರು.

ಈ ಸಂದರ್ಭದಲ್ಲಿ ಶಾಸಕ ರಾಮದಾಸ್, ನಾವು ಮೂವರು ಒಟ್ಟಿಗೆ ಇರೋದ್ರಿಂದ ಏನಾಗಬಹುದು ಎಂದು ಮಾಧ್ಯಮದವರು ಕೇಳ್ತಾರ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಜಿ.ಟಿ ದೇವೇಗೌಡರು, ಮಹದೇವ್ ಬೇರೆ 30 ಕೋಟಿ ಕೊಡಕ್ ಬಂದಿದ್ರು ಅಂದವ್ನೆ ಬಿಡ್ರಪ್ಪ ಎಂದು ಅಪಹಾಸ್ಯ ಮಾಡಿದರು. ಈ‌ ಮಾತಿಗೆ ಧ್ವನಿಗೂಡಿಸಿದ ಶಾಸಕ ಎಲ್.ನಾಗೇಂದ್ರ..ಅದ್ಯಂಗಣ್ಣ ವಿಧಾನಸೌಧ ರೂಂ ಒಳಗೆ ೩೦ ಕೋಟಿ ದುಡ್ಡು ಬಿಡ್ತಾರೆ ಎಂದು ಪ್ರಶ್ನಿಸಿದರು. ಇದೆಲ್ಲದ್ದಕ್ಕೂಸಚಿವ ಜಿ.ಟಿ.ಡಿ.. ನಗುವಿನ ಉತ್ತರ ಕೊಟ್ಟು ಹೊರನಡೆದರು.

Key words: 30 crore -offer – MLA Mahadev-Minister  GT devegowda -BJP MLAs- mocked.