Sunday, October 18, 2026

Dasara Wishes

Happy Dasara
Home Front Page ನನಗೆ 3 ಕಷ್ಟದ  ಕ್ಷೇತ್ರ ವಹಿಸದ್ರೆ ಗೆಲ್ಲಿಸಿಕೊಂಡು ಬರ್ತೇನೆ- ಮಾಜಿ ಸಚಿವ ವಿ.ಸೋಮಣ್ಣ.

ನನಗೆ 3 ಕಷ್ಟದ  ಕ್ಷೇತ್ರ ವಹಿಸದ್ರೆ ಗೆಲ್ಲಿಸಿಕೊಂಡು ಬರ್ತೇನೆ- ಮಾಜಿ ಸಚಿವ ವಿ.ಸೋಮಣ್ಣ.

ಬೆಂಗಳೂರು,ಜನವರಿ,15,2024(www.justkannada.in): ಹೈಕಮಾಂಡ್ ನಾಯಕರ ಭೇಟಿ ವೇಳೆ ನನಗೆ ಕಷ್ಟದ ಮೂರು ಕ್ಷೇತ್ರಗಳನ್ನ ಕೊಡಿ ಗೆಲ್ಲಿಸಿಕೊಂಡು ಬರ್ತೇನೆ ಎಂದು ಹೇಳಿದ್ದೇನೆ ಎಂದು ಮಾಜಿ ಸಚಿವ ವಿ.ಸೋಮಣ್ಣ ತಿಳಿಸಿದರು.

ಹೈಕಮಾಂಡ್ ನಾಯಕರ ಭೇಟಿ ಕುರಿತು ಇಂದು ಮಾಧ್ಯಮಗಳ ಜೊತೆ ಮಾತನಾಡಿದ ವಿ.ಸೋಮಣ್ಣ, ನಾನು ರಾಜ್ಯಸಭೆ ಸ್ಥಾನ ಕೇಳಿದ್ದೇನೆ. ನನಗೆ 3 ಕಷ್ಟದ ಕ್ಷೇತ್ರ ಕೊಡಿ ಎಂದಿದ್ದೇನೆ.  ಯಾವುದೇ 3 ಕ್ಷೇತ್ರಗಳನ್ನ ವಹಿಸಿದರೇ ಗೆಲ್ಲಿಕೊಂಡು ಬರುತ್ತೇನೆ. 28 ಕ್ಷೇತ್ರಗಳ ಪೈಕಿ 3ಕ್ಷೇತ್ರಗಳನ್ನ ಕೊಟ್ಟರೆ ಕೆಲಸ  ಮಾಡುತ್ತೇನೆ. ಪಕ್ಷದಲ್ಲಿ ನನಗೆ ನನ್ನ ಶ್ರಮ ಇದೆ ಎಂದರು. ನನಗೆ 3 ಕಷ್ಟದ ಕ್ಷೇತ್ರ ವಹಿಸದ್ರೆ ಗೆಲ್ಲಿಸಿಕೊಂಡು ಬರ್ತೇನೆ- ಮಾಜಿ ಸಚಿವ ವಿ.ಸ...

ಒಳ್ಳೇತನಕ್ಕೆ ಒಳ್ಳೇ ನಡವಳಿಕೆಗೆ ಸಹಾಯ ಆಗುತ್ತೆ.  ಅದಕ್ಕೆ ದೆಹಲಿ ಭೇಟಿಯೇ ಒಂದು ಉದಹಾರಣೆ. ಅಮಿತ್ ಶಾ, ನಡವಳಿಕೆ ಅವರ ತೀರ್ಮಾನ, ಭಾವನೆ ಎಲ್ಲವೂ ಕೂಡ ಸುಖಾಂತ್ಯವಾಗಿದೆ. ಕೆಲಸ ಮಾಡಿ ಬಳಿಕ ಮುಂದಿನದ್ದನ್ನ ಚರ್ಚೆ ಮಾಡುತ್ತೇವೆ ಎಂದರು.

Key words: 3 difficult-constituencies- I will -win- Former minister- V. Somanna