223 ತಾಲೂಕು ಬರ ಪೀಡಿತ ಎಂದು ಘೋಷಣೆ:ರೈತನ ಖಾತೆಗೆ ಪರಿಹಾರ ಹಣ-ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್.

ಬೆಂಗಳೂರು,ಜನವರಿ,26,2024(www.justkannada.in): ರಾಜ್ಯದಲ್ಲಿ 223 ತಾಲೂಕು ಬರ ಪೀಡಿತ ಎಂದು ಘೋಷಣೆ ಮಾಡಲಾಗಿದೆ. ರೈತನ ಖಾತೆಗೆ ಪರಿಹಾರ ಹಣ ಹಾಕಲಾಗುತ್ತದೆ ಎಂದು  ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ತಿಳಿಸಿದರು.

ಬೆಂಗಳೂರಿನಲ್ಲಿ 75ನೇ ಗಣರಾಜ್ಯೋತ್ಸವ ಸಂಭ್ರಮ ಹಿನ್ನೆಲೆ ಮಾಣೆಕ್ ಷಾ ಪರೇಡ್ ಮೈದಾನದಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಭಾಷಣ ಮಾಡಿದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, 223 ತಾಲೂಕು ಬರ ಪೀಡಿತ ಎಂದು ಘೋಷಣೆ ಮಾಡಲಾಗಿದೆ. ಈ ಪೈಕಿ 196 ತೀವ್ರ ಬರಪೀಡಿತ ತಾಲೂಕುಗಳಿವೆ. ರಾಜ್ಯ ಸರ್ಕಾರ NDRFನಿಂದ ಅನುದಾನ ಕೋರಿದೆ. ಪ್ರತಿ ರೈತನ ಖಾತೆಗೆ 2 ಸಾವಿರ ರೂ. ಪರಿಹಾರ ಹಾಕಲಾಗುತ್ತೆ. ಮಧ್ಯಂತರ ಪರಿಹಾರ ಬಿಡುಗಡೆ ಮಾಡಲಾಗುತ್ತಿದೆ. ಮನ್ರೇಗಾ ಯೋಜನೆಯಡಿ ಕೆಲಸ ಒದಗಿಸಲಾಗಿದೆ. 63.13 ಲಕ್ಷ ಜನರಿಗೆ ಕೆಲಸವನ್ನ ಒದಗಿಸಲಾಗಿದೆ. 72.38 ಲಕ್ಷ ಮನೆಗಳಿಗೆ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಲಾಗಿದೆ ಎಂದರು ತಿಳಿಸಿದರು.

ಹಾಗೆಯೇ ಬೆಂಗಳೂರಿನಲ್ಲಿ ಟ್ರಾಫಿಕ್​ ನಿಯಂತ್ರಣಕ್ಕೆ ಪರಿಹಾರ ಕೈಗೊಳ್ಳಲಾಗಿದೆ. ಆಯ್ದ ಸ್ಥಳಗಳಲ್ಲಿ ಸುರಂಗ ರಸ್ತೆಗಳ ನಿರ್ಮಾಣಕ್ಕೆ ಯೋಜನೆ ಮಾಡಲಾಗಿದೆ. ಎಲ್ಲಾ ಶಾಲೆಗಳಲ್ಲಿ ಸಂವಿಧಾನ ಪೀಠಿಕೆ ಬೋಧನೆ, ಭಾರತ ಸಂವಿಧಾನ ಪೀಠಿಕೆ ಫೋಟೋ ಹಾಕಲು ಕ್ರಮ ಕೈಗೊಳ್ಳಲಾಗಿದೆ. ಪ. ಜಾತಿಯ 69,190 ವಿದ್ಯಾರ್ಥಿಗಳಿಗೆ 133.82 ಕೋಟಿ ರೂ. ಪ್ರೋತ್ಸಾಹ ಧನ ನೀಡಲಾಗಿದೆ. SC, ST ನಿರುದ್ಯೋಗಿಗಳಿಗೆ ಸ್ವಾವಲಂಬಿ ಸಾರಥಿ ಯೋಜನೆ ಜಾರಿಗೊಳಿಸಲಾಗಿದೆ ಎಂದು ರಾಜ್ಯಪಾಲ ಗೆಹ್ಲೋಟ್ ತಿಳಿಸಿದರು.

Key words: 223 taluks- declared -drought-affected-Governor -Thawar Chand Gehlot.