ಶಾಸಕರುಗಳು ಒಟ್ಟಾಗಿ ಬಂದು ದಸರಾ ವೀಕ್ಷಣೆ ಮಾಡುವುದಕ್ಕೆ ರಾಜಕೀಯ ಬಣ್ಣ ಬಳಿಯೋದು ಬೇಡ- ಸಚಿವ ಎಂ.ಸಿ ಸುಧಾಕರ್.

ಮೈಸೂರು,ಅಕ್ಟೋಬರ್,18,2023(www.justkannada.in):  ಕಾಂಗ್ರೆಸ್ ನಲ್ಲಿ ಶಾಸಕರ ಅಸಮಾಧಾನ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಉನ್ನತ ಶಿಕ್ಷಣ ಸಚಿವ ಎಂ.ಸಿ ಸುಧಾಕರ್, ಶಾಸಕರುಗಳು ಒಟ್ಟಾಗಿ ಬಂದು ದಸರಾ ವೀಕ್ಷಣೆ ಮಾಡುವುದಕ್ಕೆ ರಾಜಕೀಯ ಬಣ್ಣ ಬಳಿಯೋದು ಬೇಡ ಎಂದಿದ್ದಾರೆ.

ಇಂದು ಮೈಸೂರಿನಲ್ಲಿ ಮಾತನಾಡಿದ ಸಚಿವ ಎಂ.ಸಿ ಸುಧಾಕರ್,  ಶಾಮನೂರು ಶಿವಶಂಕರಪ್ಪನವರು ಅತ್ಯಂತ ಹಿರಿಯರು. ಅವರು ಸಮುದಾಯದ ಬಗ್ಗೆ ಕಾಳಜಿಯಿರುವ ನಾಯಕ. ಅವರು ಮಾತನಾಡಿರುವುದಕ್ಕೆ ಈಗಾಗಲೇ ಸಚಿವರು ಮಾಹಿತಿಗಳನ್ನ ನೀಡಿದ್ದಾರೆ ಎಂದರು

ಸಚಿವ ಸತೀಶ್ ಜಾರಕಿಹೊಳಿ ಅಸಮಾಧಾನ ವಿಚಾರ, ಮೊಟ್ಟೆಯಿಂದ ಕೋಳಿ ಮರಿ ಆಚೆ ಬರುವುದಕ್ಕೂ ಮುನ್ನ ಮಾಧ್ಯಮಗಳು ಆಗೇ ಈಗೆ ಅಂತ ಹೇಳ್ತಿದ್ದಾರೆ. ಸತೀಶ್ ಜಾರಕಿಹೊಳಿಯವರು ಉತ್ತರ ಕರ್ನಾಟಕದವರು. ಅವರ ಜೊತೆ ಶಾಸಕರು ಒಟ್ಟಾಗಿ ಮೈಸೂರು ದಸರಾ ವೀಕ್ಷಣೆಗೆ ಬರುತ್ತೇವೆ ಅಂದುಕೊಂಡಿದ್ರು.. ಇದ್ರಲ್ಲಿ ಯಾವುದೇ ರೀತಿಯ ಅಸಮಾಧಾನ ಇಲ್ಲ. ಶಾಸಕರುಗಳು ಒಟ್ಟಾಗಿ ಬಂದು ದಸರಾ ವೀಕ್ಷಣೆ ಮಾಡುವುದಕ್ಕೆ ರಾಜಕೀಯ ಬಣ್ಣ ಬಳಿಯೋದು ಬೇಡ ಎಂದರು.

ವಿಶ್ವ ವಿದ್ಯಾನಿಲಯಗಳಲ್ಲಿ ಭೋಧಕರ ಸಮಸ್ಯೆಯಿದೆ. ಜೊತೆಗೆ ಅನೇಕ ಸಮಸ್ಯೆಗಳು ಸಹ ಇವೆ. ನಾನು ಈಗಾಗಲೇ ಅನೇಕ ವಿಶ್ವ ವಿದ್ಯಾನಿಲಯಗಳಿಗೆ ಭೇಟಿ ಕೊಟ್ಟು ಮಾಹಿತಿ ಪಡೆದಿದ್ದೇನೆ. ಇರುವ ವಿಶ್ವ ವಿದ್ಯಾನಿಲಯಗಳ ಸಮಸ್ಯೆಗಳನ್ನ ಬಗೆಹರಿಸಬೇಕು. ಅದಕ್ಕೆ ಬೇಕಾದ ಅಗತ್ಯ ಸೌಲಭ್ಯಗಳನ್ನ ನೀಡಬೇಕಲ್ವೆ. ಸರ್ಕಾರಿ ವಿಶ್ವ ವಿದ್ಯಾನಿಲಯಗಳಿಗೆ ಬರುವವರು ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಅಲ್ಪಸಂಖ್ಯಾತ ಮತ್ತು ಹಿಂದುಳಿದ ಸಮುದಾಯದ ಮಕ್ಕಳು. ಆರೋಗ್ಯಕರ ವಿಶ್ವ ವಿದ್ಯಾನಿಲಯಗಳನ್ನಾಗಿ ಮಾಡಬೇಕು. ಇರುವ ವಿಶ್ವ ವಿದ್ಯಾನಿಲಯಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕಿದೆ ಮುಖ್ಯಮಂತ್ರಿಗಳು ಸಹ ನಮಗೆ  ಸಹಮತ ನೀಡಿದ್ದಾರೆ ಎಂದರು.

Key words: no political- color – MLAs -Minister -MC Sudhakar.