2,000 ರೂ. ನೋಟು ಬದಲಾವಣೆ: ದಿನಾಂಕ ವಿಸ್ತರಿಸಿ ಆರ್’ಬಿಐ ಆದೇಶ

ಬೆಂಗಳೂರು, ಅಕ್ಟೋಬರ್ 01, 2023 (www.justkannada.in): 2,000 ರೂ. ನೋಟುಗಳನ್ನು ಬದಲಾಯಿಸಿಕೊಳ್ಳಲು ಮತ್ತು ಠೇವಣಿ ಇಡಲು ಕೊನೆಯ ದಿನಾಂಕವನ್ನು ಭಾರತೀಯ ರಿಸರ್ವ್ ಬ್ಯಾಂಕ್ ವಿಸ್ತರಿಸಿದೆ.

2,000 ರೂ. ಮುಖಬೆಲೆಯ ನೋಟುಗಳನ್ನು ಹಿಂಪಡೆಯುವ 4 ತಿಂಗಳ ಗಡುವು ನಿನ್ನೆಗೆ ಮುಕ್ತಾಯಗೊಂಡಿತ್ತು. ಇದೀಗ ಮತ್ತೆ ಏಳು ದಿನ ವಿಸ್ತರಣೆ ಮಾಡಿದ್ದು, ಆ ಗಡುವು ಅಕ್ಟೋಬರ್ 7 ರವರೆಗೆ ಇರಲಿದೆ.

ಅಕ್ಟೋಬರ್ 8 ರಿಂದ ಜಾರಿಗೆ ಬರುವಂತೆ ಬ್ಯಾಂಕ್ ಶಾಖೆಗಳಲ್ಲಿ 2,000 ರೂ. ನೋಟುಗಳ ಠೇವಣಿ ಅಥವಾ ವಿನಿಮಯವನ್ನು ನಿಲ್ಲಿಸಲಾಗುತ್ತದೆ.

2,000 ರೂ. ನೋಟುಗಳು ಅಕ್ಟೋಬರ್ 7ರ ನಂತರವೂ ಕಾನೂನುಬದ್ಧವಾಗಿ ಮುಂದುವರಿಯುತ್ತದೆ. ಆದರೆ ಅವುಗಳನ್ನು ಆರ್‌ಬಿಐ ಕಚೇರಿಗಳಲ್ಲಿ ಮಾತ್ರ ವಿನಿಮಯ ಮಾಡಿಕೊಳ್ಳಬಹುದಾಗಿದೆ.

ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಲು ನೋಟುಗಳನ್ನು ಠೇವಣಿ ಇಡಲು ಅಥವಾ ಬ್ಯಾಂಕ್‌ಗಳಲ್ಲಿ ವಿನಿಮಯ ಮಾಡಿಕೊಳ್ಳಲು ಆರ್‌ಬಿಐ ಕಾಲಾವಧಿ ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ.