ಜ್ಞಾನವಾಪಿ ಮಸೀದಿ ಸರ್ವೆ ವರದಿ ಸಲ್ಲಿಕೆಗೆ 2 ದಿನ ಕಾಲಾವಕಾಶ: ಕೋರ್ಟ್ ಕಮಿಷನರ್ ಅಜಯ್ ಮಿಶ್ರಾ ವಜಾ.

ವಾರಣಾಸಿ,ಮೇ,17,2022(www.justkannada.in):  ಜ್ಞಾನವಾಪಿ ಮಸೀದಿ ಸರ್ವೆ ವರದಿ ಸಲ್ಲಿಕೆಗೆ ಎರಡು ದಿನಗಳ ಕಾಲಾವಕಾಶ ನೀಡಿ ಜೊತೆಗೆ ಕೋರ್ಟ್ ಕಮಿಷನರ್ ಅಜಯ್ ಮಿಶ್ರಾರನ್ನ ವಜಾಗೊಳಿಸಿ  ವಾರಣಾಸಿ ಆದೇಶಿಸಿದೆ.

ವಾರಣಾಸಿಯ ಪ್ರಸಿದ್ಧ ಕಾಶಿ ವಿಶ್ವನಾಥ ದೇವಾಲಯದ ಪಕ್ಕದಲ್ಲಿರುವ ಜ್ಞಾನವಾಪಿ ಮಸೀದಿ ಸಂಕೀರ್ಣದ ವೀಡಿಯೊಗ್ರಾಫಿಕ್ ಸರ್ವೆಗೆ ವಾರಣಾಸಿ ನ್ಯಾಯಾಲಯ ಆದೇಶಿಸಿತ್ತು. ಈ ಮಧ್ಯೆ ವರದಿ ಸಿದ್ಧಪಡಿಸಲು  ಆಯೋಗ ಹೆಚ್ಚುವರಿ ಸಮಯ ಕೇಳಿತ್ತು. ಈ ಹಿನ್ನೆಲೆಯಲ್ಲಿ ಕೋರ್ಟ್ 2ದಿನಗಳ ಕಾಲಾವಕಾಶ ನೀಡಿದೆ.

ಸರ್ವೆ ವರದಿ ಸೋರಿಕೆ ಮಾಡಿದ್ದಕ್ಕೆ ಕೋರ್ಟ್ ಕಮಿಷನರ್ ಅಜಯ್ ಮಿಶ್ರಾ ಬದಲಾವಣೆ ಮಾಡಿದ್ದು,  ಉಳಿದ ಇಬ್ಬರು ಕಮಿಷನರ್ ಮುಂದುವರಿಯಲಿದ್ದಾರೆ ಎಂದು ಕೋರ್ಟ್ ತಿಳಿಸಿದೆ.

Key words: 2 day -deadline – Jnanavapi -Masjid -Survey –Report- Court