Saturday, October 3, 2026

BDA Apartments

You should utilize any platform that you get to learn: Nagathihalli Chandrashekar BDA JK_Adv BDA Adv
Home Front Page ಕೆ.ಎಸ್ ಈಶ್ವರಪ್ಪ ಹೇಳಿಕೆಗೆ  ಬಿಜೆಪಿ ಸೇರಿದ್ದ 17 ಮಂದಿ ಉತ್ತರಿಸಿಲಿ-ಸಚಿವ ಎಂ.ಬಿ ಪಾಟೀಲ್.

ಕೆ.ಎಸ್ ಈಶ್ವರಪ್ಪ ಹೇಳಿಕೆಗೆ  ಬಿಜೆಪಿ ಸೇರಿದ್ದ 17 ಮಂದಿ ಉತ್ತರಿಸಿಲಿ-ಸಚಿವ ಎಂ.ಬಿ ಪಾಟೀಲ್.

ಹುಬ್ಬಳ್ಳಿ,ಜೂನ್,26,2023(www.justkannada.in): ಬಿಜೆಪಿ ಸೋಲಿಗೆ ಆಪರೇಷನ್ ಕಮಲವೇ ಕಾರಣ. ಕಾಂಗ್ರೆಸ್ ನವರು ಬಂದ ಮೇಲೆ ಬಿಜೆಪಿಯಲ್ಲಿ ಶಿಸ್ತು ಕಡಿಮೆಯಾಗಿದೆ ಎಂಬ ಮಾಜಿ ಸಚಿವ ಕೆಎಸ್​ ಈಶ್ವರಪ್ಪ ಹೇಳಿಕೆಗೆ ಬೃಹತ್ ಕೈಗಾರಿಕಾ ಸಚಿವ ಎಂಬಿ ಪಾಟೀಲ್ ಪ್ರತಿಕ್ರಿಯೆ ನೀಡಿದ್ದಾರೆ.

ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಹೇಳಿಕೆಗೆ  ಮುನಿರತ್ನ, ಸುಧಾಕರ್, ಎಮ್‌‌ ಟಿಬಿ ನಾಗರಾಜ್, ಎಸ್.ಟಿ.ಸೋಮಶೇಖರ್, ಬಿ.ಸಿ.ಪಾಟೀಲ್ ಸೇರಿದಂತೆ ಬಿಜೆಪಿ ಸೇರಿದ 17 ಜ‌ನರು ಉತ್ತರಿಸಲಿ. ಅಲ್ಲದೆ, ಅವರನ್ನ ಮರಳಿ ಕಾಂಗ್ರೆಸ್‌ ಗೆ ಸೇರಿಸಿಕೊಳ್ಳುವ ಮಾತೆ ಇಲ್ಲ ಎಂದರು.

ರಾಜ್ಯದ ಜನರಿಗೆ ಕೊಟ್ಟ ಮಾತು ಉಳಿಸಿಕೊಳ್ಳುತ್ತೇವೆ. ಕಾಂಗ್ರೆಸ್ 5 ಗ್ಯಾರಂಟಿ ಯೋಜನೆ  ಜಾರಿ ಮಾಡುತ್ತೇವೆ. ಕೇಂದ್ರ ಸರ್ಕಾರ ಎಷ್ಟೇ ತೊಂದ್ರೆ ಕೊಟ್ಟರೂ ಅಕ್ಕಿ ಕೊಡುತ್ತೇವೆ . ವಿದ್ಯುತ್  ದರ ಏರಿಕೆ ನಾವು ಮಾಡಿದ್ದಲ್ಲ. ಕೆಇಆರ್ ಸಿ ವಿದ್ಯುತ್ ದರ ಏರಿಕೆ ಮಾಡಿದೆ. ಕೆಇಆರ್ ಸಿ ತೆಗೆದುಕೊಂಡ ನಿರ್ಧಾರಗಳಲ್ಲಿ ಲೋಪಗಳಿವೆ. ಸರಕಾರದ ಮಟ್ಟದಲ್ಲಿ ಚರ್ಚಿಸಿ ಸರಿಪಡಿಸುತ್ತೇವೆ ಎಂದು ಸಚಿವ ಎಂಬಿ ಪಾಟೀಲ್ ತಿಳಿಸಿದರು.

Key words: 17 people – BJP –answe-r KS Eshwarappa’s- statement – Minister -MB Patil.