Saturday, October 17, 2026

Dasara Wishes

Happy Dasara
Home Front Page ಹೈರಿಸ್ಕ್ ದೇಶದಿಂದ ಬಂದಿದ್ದ 12 ಮಂದಿಗೆ ಕೋವಿಡ್ ಪಾಸಿಟಿವ್.

ಹೈರಿಸ್ಕ್ ದೇಶದಿಂದ ಬಂದಿದ್ದ 12 ಮಂದಿಗೆ ಕೋವಿಡ್ ಪಾಸಿಟಿವ್.

ಬೆಂಗಳೂರು,ಡಿಸೆಂಬರ್,26,2022(www.justkannada.in):  ಕಳೆದ ಮೂರು ದಿನಗಳಲ್ಲಿ ಹೈರಿಸ್ಕ್ ದೇಶಗಳಿಂದ ಬಂದಿದ್ದ 12 ಮಂದಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಚೀನಾ ಸೇರಿದಂತೆ ವಿದೇಶದಿಂದ ಬಂದಿದ್ದ 12 ಮಂದಿಗೆ ಕೋವಿಡ್ ಪಾಸಿಟಿವ್ ಕಂಡು ಬಂದಿದೆ. ಏರ್ ಪೋರ್ಟ್ ಗೆ  ಬಂದಿದ್ದ ಪ್ರಯಾಣಿಕರಿಗೆ ಕೊರೊನಾ ಲಕ್ಷಣ ಕಂಡು ಬಂದ ಹಿನ್ನೆಲೆ ಕೆಂಪೇಗೌಡ ಏರ್ ಪೋರ್ಟ್ ನಲ್ಲಿ ಪ್ರಯಾಣಿಕರಿಗೆ ಕೋವಿಡ್ ಟೆಸ್ಟ್ ಮಾಡಲಾಗಿತ್ತು. ಟೆಸ್ಟ್ ವೇಳೆ 12 ಜನರಿಗೆ ಕೋವಿಡ್ ದೃಢಪಟ್ಟಿದೆ.ಹೈರಿಸ್ಕ್ ದೇಶದಿಂದ ಬಂದಿದ್ದ 12 ಮಂದಿಗೆ ಕೋವಿಡ್ ಪಾಸಿಟಿವ್ covid

ಈ ಪೈಕಿ ಓರ್ವ ಚೀನಾ ದೇಶದಿಂದ ಬಂದಿದ್ದ ಪ್ರಯಾಣಿಕ ಎನ್ನಲಾಗಿದೆ. ನಿನ್ನೆ ಚೀನಾದಿಂದ ಬಂದ 40 ವರ್ಷದ ವ್ಯಕ್ತಿಯನ್ನು ಕೋವಿಡ್ ತಪಾಸಣೆಗೆ ಒಳಪಡಿಸಲಾಗಿದೆ. ಅದರಂತೆ ಬಂದ ವರದಿಯಲ್ಲಿ ಪಾಸಿಟಿವ್ ಕಾಣಿಸಿಕೊಂಡಿದ್ದು, ತಕ್ಷಣವೇ ಖಾಸಗಿ ಆಸ್ಪತ್ರೆಗೆ ರವಾನಿಸಿ ಐಸೋಲೇಷನ್ ಮಾಡಲಾಗಿದ್ದು, ಹೆಚ್ಚಿನ ತಪಾಸಣೆಗಾಗಿ ವ್ಯಕ್ತಿಯ ಮಾದರಿ ಸಂಗ್ರಹ ಮಾಡಿ ಜಿನೋಮಿಕ್ ಸೀಕ್ವೆನ್ಸಿಂಗ್​ಗೆ  ರವಾನಿಸಲಾಗಿದೆ.

Key words: 12 people – came – high risk- countries – Covid positive.