ಕೋವಿಡ್ ಭೀತಿ: ವಿದೇಶದಿಂದ ಬಂದ 119 ಪ್ರಯಾಣಿಕರ ಪೈಕಿ ನಾಲ್ವರಿಗೆ ಕೊರೋನಾ ಪಾಸಿಟಿವ್.

ಬೆಂಗಳೂರು,ಡಿಸೆಂಬರ್,27,2022(www.justkannada.in):  ಚೀನಾ ಸೇರಿ ಹಲವು ದೇಶಗಳಲ್ಲಿ ಕೋವಿಡ್ ಮತ್ತೆ ಉಲ್ಬಣವಾಗುತ್ತಿದ್ದು ಈ ಮಧ್ಯೆ ಭಾರತಕ್ಕೂ ಕೊರೋನಾ ಆತಂಕ ಶುರುವಾಗಿದೆ. ಈ ಹಿನ್ನೆಲೆಯಲ್ಲಿ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿರುವ ಸರ್ಕಾರ ವಿದೇಶದಿಂದ ಬರುವವರಿಗೆ ಕೋವಿಡ್ ಟೆಸ್ಟ್ ನಡೆಸುತ್ತಿದೆ.

ನಿನ್ನೆ ವಿದೇಶದಿಂದ ಬಂದ ನಾಲ್ವರಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ.  ನಿನ್ನೆ ವಿದೇಶದಿಂದ ಬಂದ 119 ಪ್ರಯಾಣಿಕರಿಗೆ ಕೊರೋನಾ ಟೆಸ್ಟ್ ಮಾಡಲಾಗಿತ್ತು. ಈ ಪೈಕಿ ನಾಲ್ವರಿಗೆ  ಕೋವಿಡ್ ಪಾಸಿಟಿವ್ ದೃಢಪಟ್ಟಿದೆ.  ನಾಲ್ವರನ್ನ ಐಸೋಲೇಷನ್ ಮಾಡಲಾಗಿದೆ. ವಿದೇಶದಿಂದ ಬಂದವರಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣ 16ಕ್ಕೆ ಏರಿಕೆಯಾಗಿದೆ.

Key words: 119 passengers –abroad-four – corona positive.