Thursday, October 15, 2026

Dasara Wishes

Strengthening DasraWishes_JK DasraWishes JK
Happy Dasara
Home Front Page ರಾಜ್ಯದಲ್ಲಿ ಇಂದು 104 ಜನರಿಗೆ ಕೋವಿಡ್ ದೃಢ: ಆರೋಗ್ಯ ಇಲಾಖೆ ಮಾಹಿತಿ.

ರಾಜ್ಯದಲ್ಲಿ ಇಂದು 104 ಜನರಿಗೆ ಕೋವಿಡ್ ದೃಢ: ಆರೋಗ್ಯ ಇಲಾಖೆ ಮಾಹಿತಿ.

ಬೆಂಗಳೂರು,ಡಿಸೆಂಬರ್,23,2023(www.justkannada.in):  ರಾಜ್ಯದಲ್ಲಿ ಕೋವಿಡ್ ‍ಪ್ರಕರಣ ಹೆಚ್ಚುತ್ತಿದ್ದು  ಇಂದು 104 ಜನರಿಗೆ ಕೊರೋನಾ ಸೋಂಕು ತಗುಲಿದೆ.

ಈ ಕುರಿತು ರಾಜ್ಯ ಆರೋಗ್ಯ  ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕೃತವಾಗಿ ಮಾಹಿತಿ ಬಿಡುಗಡೆ ಮಾಡಿದೆ. 104 ಜನರಿಗೆ ಕೋವಿಡ್ ತಗುಲಿದ್ದು, ಸಕ್ರಿಯ ಕೊರೋನಾ ಸೋಂಕಿತರ ಸಂಖ್ಯೆ 271ಕ್ಕೆ ಏರಿಕೆಯಾಗಿದೆ.   ರಾಜ್ಯದಲ್ಲಿ ಇಂದು 104 ಜನರಿಗೆ ಕೋವಿಡ್ ದೃಢ: ಆರೋಗ್ಯ ಇಲಾಖೆ ಮಾಹಿತಿ covid

ಬೆಂಗಳೂರಿನಲ್ಲಿ ಇಂದು 85 ಮಂದಿಗೆ ಕೋವಿಡ್ ಪಾಸಿಟಿವ್ ಪತ್ತೆಯಾಗಿದ್ದು, ಇಲ್ಲಿ ಸಕ್ರಿಯ ಪ್ರಕರಣಗಳು  234ಕ್ಕೆ ಏರಿಕೆಯಾಗಿದೆ.  ಇಂದು ಕೋವಿಡ್‍ ಸಾವಿನ ಪ್ರಕರಣ ಕಂಡು ಬಂದಿಲ್ಲ. ಇಂದು 8 ಮಂದಿ ಸೋಂಕಿತರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಕೋವಿಡ್ ಪಾಸಿಟಿವಿಟಿ ದರ ಶೇ. 5.90 ರಷ್ಟು ಇದೆ. 162 ಮಂದಿ ಹೋಮ್ ಐಸೋಲೇಷನ್ ನಲ್ಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Key words: 104 people -covid positive – today