11ನೇ ಮಹಡಿ ಮೇಲಿನಿಂದ ಬಿದ್ದು 10 ವರ್ಷದ ಬಾಲಕ ಸಾವು.

ಬೆಂಗಳೂರು,ಅಕ್ಟೋಬರ್,1,2021(www.justkannada.in):  11ನೇ ಮಹಡಿ ಮೇಲೆ ಆಟವಾಡುತ್ತಿದ್ದ 10 ವರ್ಷದ ಬಾಲಕ ಮಹಡಿಯಿಂದ ಬಿದ್ದು ಸಾವನ್ನಪ್ಪಿರುವ ಘಟನೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ.

ಬನಶಂಕರಿಯಲ್ಲಿರುವ ಶೋಭಾ ವ್ಯಾಲಿ ಅಪಾರ್ಟ್‌ಮೆಂಟ್‌ ನಲ್ಲಿ ಈ ಘಟನೆ ನಡೆದಿದೆ. 11ನೇ ಮಹಡಿಯಿಂದ ಬಿದ್ದು 10 ವರ್ಷದ ಬಾಲಕ ಗಗನ್  ಮೃತಪಟ್ಟಿದ್ದಾನೆ. ಅಪಾರ್ಟ್‌ಮೆಂಟ್‌ ನ ಬಾಲ್ಕನಿಯಲ್ಲಿ 10 ವರ್ಷದ ಗಗನ್ ಆಟವಾಡುತ್ತಿದ್ದ.

ಮನೆಯಲ್ಲಿ ಯಾರೂ ಇಲ್ಲದ ವೇಳೆ ಟೆರೇಸ್ ಮೇಲೆ ಆಟ ಆಡಲು ಬಾಲಕ ತೆರಳಿದ್ದ ಎನ್ನಲಾಗಿದ್ದು ಈ ವೇಳೆ ಹನ್ನೊಂದನೇ ಮಹಡಿಯಿಂದ ಕೆಳಗೆ ಬಿದ್ದು ಬಾಲಕ ಸಾವನ್ನಪ್ಪಿದ್ದಾನೆ. ಈ ಕುರಿತು ಆರ್ ಆರ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: 10-year-old boy –dies- after- falling – top – 11th floor.