Wednesday, September 30, 2026

BDA Apartments

ನನ್ನನ್ನ ನಂಬಿದ್ದ 20 ಶಾಸಕರಿಗಾಗಿ ಹೊರ ಬಂದೆ: ಇನ್ನು 10 ಮಂದಿ ನನ್ನ ಸಂಪರ್ಕದಲ್ಲ...
Home Front Page ನನ್ನನ್ನ ನಂಬಿದ್ದ 20 ಶಾಸಕರಿಗಾಗಿ ಹೊರ ಬಂದೆ: ಇನ್ನು 10 ಮಂದಿ ನನ್ನ ಸಂಪರ್ಕದಲ್ಲಿದ್ದಾರೆ- ರಮೇಶ್...

ನನ್ನನ್ನ ನಂಬಿದ್ದ 20 ಶಾಸಕರಿಗಾಗಿ ಹೊರ ಬಂದೆ: ಇನ್ನು 10 ಮಂದಿ ನನ್ನ ಸಂಪರ್ಕದಲ್ಲಿದ್ದಾರೆ- ರಮೇಶ್ ಜಾರಕಿಹೊಳಿ ಹೊಸ ಬಾಂಬ್

ಬೆಳಗಾವಿ,ಸೆ,7,2019(www.justkannada.in):  ನನ್ನನ್ನ ನಂಬಿದ್ದ 20 ಶಾಸಕರಿಗಾಗಿ ನಾನು ಹೊರ ಬಂದೆ.  ಇನ್ನು 10 ಮಂದಿ ಶಾಸಕರು ನನ್ನ ಸಂಪರ್ಕದಲ್ಲಿದ್ದಾರೆ ಎಂದು ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಹೊಸ ಬಾಂಬ್ ಸಿಡಿಸಿದ್ದಾರೆ.

ಇಂದು ಗೋಕಾಕ್ ಪಟ್ಟಣದ ರಮೇಶ್ ಜಾರಕಹೊಳಿ ನಿವಾಸದ ಮುಂಭಾಗದಲ್ಲಿಯೇ ಸಂಕಲ್ಪ ಸಮಾವೇಶ ಏರ್ಪಡಿಸಲಾಗಿತ್ತು. ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ರಮೇಶ್ ಜಾರಕಿಹೊಳಿ, ಹೆಚ್.ಡಿ ಕುಮಾರಸ್ವಾಮಿ ನನ್ನನ್ನ ಡಿಸಿಎಂ ಮಾಡಲು ಒಪ್ಪಿದ್ದರು. ಕಾಂಗ್ರೆಸ್‌ ಪಕ್ಷದ ಬಗ್ಗೆ ಬಹಳ ಅಭಿಮಾನವಿತ್ತು, ಆದರೆ ಅಲ್ಲಿ ನನಗೆ ಸರಿಯಾದ  ನ್ಯಾಯ ಸಿಗಲಿಲ್ಲ. ಮೋಸವಾಯಿತು. ಹೀಗಾಗಿ ನಾನು ರಾಜೀನಾಮೆ ಕೊಟ್ಟಿ ಹೊರ ಬಂದೆ ಎಂದು ತಿಳಿಸಿದರು.

ನನ್ನನ್ನು ನಂಬಿ 20 ಶಾಸಕರು ರಾಜೀನಾಮೆ ಕೊಟ್ಟಿದ್ದಾರೆ. ಆ ನಂಬಿದ ಶಾಸಕರ ಪರವಾಗಿ ದೆಹಲಿಗೆ ಹೋಗಿದ್ದೇನೆ. ಈ ಅಪರೇಷನ್ ಗೆ ಸತೀಶ್ ಜಾರಕಿಹೊಳಿ ಕಾರಣ.  ನಾನು ಲಕ್ಷ್ಮಿ ದೇವರ ಮುಟ್ಟಿ ಹೇಳುತ್ತೇನೆ ಸತೀಶ್ ಮೋಸಗಾರ, ಆತನಿಂದಲೇ ಅಪರೇಷನ್ ನಡೆದಿದೆ. ಲಖನ್ ಜಾರಕಿಹೊಳಿ ಮತ್ತು ನನ್ನ ಮಧ್ಯೆ ಜಗಳ ಹಚ್ಚುವ ಕೆಲಸ ಸತೀಶ್ ಮಾಡುತ್ತಿದ್ದಾನೆ. ಮುಂದಿನ ದಿನದಲ್ಲಿ ಸತೀಶ್‍ಗೆ ಯಮಕನಮರಡಿ ಜನ ಒದ್ದು ಓಡಿಸುತ್ತಾರೆ ಎಂದು ರಮೇಶ್ ಜಾರಕಿಹೊಳಿ ಕಿಡಿಕಾರಿದರು. ಹಾಗೆಯೇ ನಾಳೆಯೇ ಉಪಚುನಾವಣೆ ನಡೆದರೇ ನಾವು ಸಿದ್ಧ ಎಂದರು.

Key words: 10 mla-contact -with –me-belagavi-Ramesh jarakiholi