Saturday, August 22, 2026

BDA Apartments

Home Crime ರೋಹಿಣಿ ಸಿಂಧೂರಿ ಕಾನೂನು ಸಮರ : ಡಿ.ರೂಪಾ ವಿರುದ್ಧ 1ಕೋಟಿ ರೂ. ಮಾನನಷ್ಟ ಮೊಕದ್ದಮೆ ಎಚ್ಚರಿಕೆ...

ರೋಹಿಣಿ ಸಿಂಧೂರಿ ಕಾನೂನು ಸಮರ : ಡಿ.ರೂಪಾ ವಿರುದ್ಧ 1ಕೋಟಿ ರೂ. ಮಾನನಷ್ಟ ಮೊಕದ್ದಮೆ ಎಚ್ಚರಿಕೆ ಕೊಟ್ಟು ನೋಟಿಸ್.

ಬೆಂಗಳೂರು. ಫೆಬ್ರವರಿ,23,2023(www.justkannada.in): ಐಪಿಎಸ್ ಅಧಿಕಾರಿ ಡಿ.ರೂಪಾ ಮೌದ್ಗಿಲ್ ಹಾಗೂ  ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರ ನಡುವಿನ ಕಿತ್ತಾಟ ಮತ್ತೊಂದು ಹಂತಕ್ಕೆ ತಲುಪ್ಪಿದ್ದು ಈ ನಡುವೆ ವೈಯಕ್ತಿಕ ತೇಜೋವಧೆ ಆರೋಪದ ಮೇಲೆ 1 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡುವುದಾಗಿ ರೋಹಿಣಿ ಸಿಂಧೂರಿ ನೋಟಿಸ್ ಮೂಲಕ ಎಚ್ಚರಿಕೆ ನೀಡಿದ್ದಾರೆ.

ಡಿ. ರೂಪಾ ರೂಪಾ ವಿರುದ್ಧ ಕಾನೂನು ಸಮರ ಮುಂದುವರೆಸಿರುವ ರೋಹಿಣಿ ಸಿಂಧೂರಿ, ಬಹಿರಂಗ ಕ್ಷಮೆಯಾಚನೆಗೆ ಆಗ್ರಹಿಸಿ 1 ಕೋಟಿ ಮಾನನಷ್ಟ ಮೊಕದ್ದಮೆ ಎಚ್ಚರಿಕೆ ನೀಡಿದ್ದಾರೆ.

ಡಿ. ರೂಪಾ ಅವರಿಗೆ ಹಿರಿಯ ವಕೀಲ ಸಿವಿ ನಾಗೇಶ್‌ ಮೂಲಕ ಲೀಗಲ್‌ ನೋಟಿಸ್‌  ನೀಡಿರುವ ರೋಹಿಣಿ ಸಿಂಧೂರಿ,ನೋಟಿಸ್‌ ನಲ್ಲಿ 21 ಅಂಶಗಳನ್ನು ಉಲ್ಲೇಖಿಸಿ ರೂಪಾ ಅವರ ಮನೆ ಹಾಗೂ ಕೆಲಸದ ಸ್ಥಳದ ವಿಳಾಸಕ್ಕೆ ಕಳುಹಿಸಿದ್ದಾರೆ. ಒಟ್ಟು 21 ಅಂಶಗಳ ಕ್ರಮ ವಹಿಸದಿದ್ದರೇ 1 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

ರೋಹಿಣಿ ಸಿಂಧೂರಿ ಅವರ ವಿರುದ್ದ ಡಿ.ರೂಪಾ ಮೌದ್ಗಿಲ್ ಅವರು ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಭ್ರಷ್ಟಾಚಾರ ಆರೋಪ ಮಾಡಿ ಪೋಸ್ಟ್ ಮಾಡಿದ್ದರು. ಅಲ್ಲದೆ ವೈಯಕ್ತಿಕ ವಿಚಾರ ಕುರಿತು ಪೋಸ್ಟ್ ಮಾಡಿದ್ದರು. ಈ ಮಧ್ಯೆ ನಿನ್ನೆ ಸಾಮಾಜಿಕ ಕಾರ್ಯಕರ್ತ ಗಂಗರಾಜು ಜೊತೆ ಡಿ.ರೂಪಾ ಮೌದ್ಗಿಲ್  ಫೋನ್ ನಲ್ಲಿ ಮಾತನಾಡಿದ್ದ ಆಡಿಯೋ ವೈರಲ್ ಆಗಿತ್ತು.

ಈ ಎಲ್ಲದರ ನಡುವೆ  ಡಿ.ರೂಪಾ ಮೌದ್ಗಿಲ್ ವಿರುದ್ದ ನಿರ್ಬಂಧಕಾಜ್ಞೆ ನೀಡುವಂತೆ ಮನವಿ ಮಾಡಿ ರೋಹಿಣಿ ಸಿಂಧೂರಿ ಅವರು ಸಿಟಿ ಸಿವಿಲ್ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ವೈಯಕ್ತಿಕ ವಿಚಾರಕ್ಕಾಗಿ ನನ್ನ ವಿರುದ್ಧ ಅವಹೇಳನ ಹೇಳಿಕೆ ನೀಡುತ್ತಿದ್ದಾರೆ. ತಮ್ಮ ವಿರುದ್ಧ ಮೆಸೇಜ್, ಫೋಟೋ, ಹೇಳಿಕೆ ಕೊಡದಂತೆ  ನಿರ್ಬಂಧ ವಿಧಿಸುವಂತೆ ಮನವಿ ಮಾಡಿದ್ದರು. ಈ ಕುರಿತು ಆದೇಶ ಇಂದು ಹೊರ ಬೀಳುವ ಸಾಧ್ಯತೆ ಇದೆ.

Key words: 1 crore -defamation case- against –IPS-D. Rupa-IAS- Rohini Sindhuri -warns