ರಾಜ್ಯದಲ್ಲಿ ಅಭಿವೃದ್ಧಿಯಾಗುತ್ತಿಲ್ಲ: ನಿಮ್ಮ ಅಭಿವೃದ್ದಿಯಾಗುತ್ತಿದೆ- ಬಿಜೆಪಿ ನಾಯಕರಿಗೆ ಮಾಜಿ ಸಿಎಂ ಹೆಚ್.ಡಿಕೆ ಟಾಂಗ್.

ಶಿವಮೊಗ್ಗ,ಫೆಬ್ರವರಿ,23,2023(www.justkannada.in): ರಾಜ್ಯದಲ್ಲಿ ಅಭಿವೃದ್ಧಿಯಾಗುತ್ತಿಲ್ಲ: ನಿಮ್ಮ ಅಭಿವೃದ್ದಿಯಾಗುತ್ತಿದೆ. ಒಬ್ಬೊಬ್ಬರ ಆಸ್ತಿ ಎಷ್ಟು ಹೆಚ್ಚಾಗಿದೆ.  ಆಸ್ತಿ ಹೆಚ್ಚಾಗಿದ್ದನ್ನ ಕಣ್ಣಾರೇ ನೋಡಿದ್ದೇವೆ ಎಂದು ಬಿಜೆಪಿ ನಾಯಕರ ವಿರುದ್ಧ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ, ನಾವು 60 ವರ್ಷ ಆದರೂ ಹೀಗೆ ಇದ್ದೇವೆ.  ಜೆಡಿಎಸ್ ಗೆ ಮತಹಾಕಿದ್ರೆ ಹೆಚ್ ಡಿಡಿ ಎಟಿಎಂ ಅಂತಾರೆ.  ಶಿವಮೊಗ್ಗ ರೌಂಡ್ ಹಾಕಿದ್ರೆ ಎಟಿಎಂ ಕಾಣುತ್ತೆ. ಬಿಜೆಪಿಯವರ ಕಲ್ಚರ್ ಹೆಗ್ಗಣ ಬಿದ್ದಿರುವ ಕಲ್ಷರ್ ಎಂದು ಹರಿಹಾಯ್ದರು.

ಕಿಚನ್ ಕ್ಯಾಬಿನೆಟ್ ಎಂದಿದ್ದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಅವರಿಗೆ ತಿರುಗೇಟು ನೀಡಿದ ಹೆಚ್.ಡಿ ಕುಮಾರಸ್ವಾಮಿ,   ಚಿಕ್ಕಮಗಳೂರಿನ ಮಹಾನುಭಾವ. ಈತ ನನ್ನ ಕುಟುಂಬದ ಬಗ್ಗೆ ಚರ್ಚೆ ನಡೆಸುತ್ತಾನೆ. ಕೆಎಂಎಫ್ ಅಭಿವೃದ್ಧಿಗೆ ರೇವಣ್ಣರ ಕೊಡುಗೆ ಇದೆ. ಜಯದೇವ ಆಸ್ಪತ್ರೆಗಿಂತ ಬೇರೆ ಉದಹಾರಣೆ ಇಲ್ಲ  ಇದಕ್ಕೂ ದೇವೇಗೌಡರ ಕುಟುಂಬ ಕಾರಣ . ಹಳೆ ಅಂಬಾಸಿಡರ್ ವರ್ಕೌಟ್ ಆಗಲ್ವಂತೆ.  ರೇಂಜ್ ರೋವರ್ ಜಾಗ್ವಾರ್ ಆಗ್ಬೆಕಂತೆ ಎಂದು ಸಿಟಿ ರವಿ ವಿರುದ್ದ ಕಿಡಿಕಾರಿದರು.

ಜೆಡಿಎಸ್ 2ನೇ ಪಟ್ಟಿಯಲ್ಲಿ ಹಾಸನ ಕ್ಷೇತ್ರದ ಅಭ್ಯರ್ಥಿ ಹೆಸರು ಘೋಷಣೆ ಮಾಡಲಾಗುತ್ತದೆ.  ಯಾರಿಗೆ ಟಿಕೆಟ್ ಅನ್ನೋದು ಕಾದು ನೋಡಿ  ಎಂದು ಹೆಚ್.ಡಿ ಕುಮಾರಸ್ವಾಮಿ ತಿಳಿಸಿದರು.

Key words: no development – state-You – developing-Former CM -HDK – BJP leaders.