ಸರ್ಕಾರವನ್ನೇ ಉರುಳಿಸಿದ್ದೇನೆ ಇದ್ಯಾವ ಲೆಕ್ಕ: ನಾಳೆಯಿಂದ ನಮ್ಮ ಆಟ ಶುರು ಎಂದ ರಮೇಶ್ ಜಾರಕಿಹೊಳಿ…

kannada t-shirts

 

ಬೆಂಗಳೂರು,ಮಾರ್ಚ್,26,2021(www.justknnada.in):  ರಾಸಲೀಲೆ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿ ದೂರು ನೀಡಿದ ವಿಚಾರ ಸಂಬಂಧ ಪ್ರತಿಕ್ರಿಯಿಸಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ, ಸರ್ಕಾರವನ್ನೇ ಉರುಳಿಸಿದ್ದೇನೆ ಇದ್ಯಾವ ಲೆಕ್ಕ. “ಇಂತಹ ಹತ್ತು ವಿಡಿಯೋಗಳು ಬರಲಿ, ನಾನು ಹೆದರುವುದಿಲ್ಲ ಎಂದು ಹೇಳಿದರು.

ಯುವತಿ ತಮ್ಮ ವಿರುದ್ದ ದೂರು ನೀಡಿದ ವಿಚಾರ ಕುರಿತು ಮಾತನಾಡಿದ ರಮೇಶ್ ಜಾರಕಿಹೊಳಿ, “ನನ್ನ ಮೇಲೆ ಆಕೆ  ಅತ್ಯಾಚಾರ ಕೇಸ್ ಹಾಕಿದರೂ ನಾನು ಅದನ್ನು ಎದುರಿಸಲು ಶಕ್ತನಾಗಿದ್ದೇನೆ. ಈ ವಿಚಾರದಲ್ಲಿ ಮೆಂಟಲಿ ನಾನು ಸಿದ್ದನಾಗಿದ್ದೇನೆ. ಕಾನೂನು ಹೋರಾಟ ನಡೆಸುತ್ತೇನೆ ಎಂದರು.cd case- Woman -complains -against -former minister- Ramesh jarakiholi.

“ನನ್ನ ವಿರುದ್ದ ಅಂದೇ ದೂರು ನೀಡಬೇಕಾಗಿತ್ತು, ಆದರೆ ನೀಡಲಿಲ್ಲ. ಇದೊಂದು ದೊಡ್ಡ ಷಡ್ಯಂತ್ರ ಎನ್ನುವುದು ಗೊತ್ತಾಗುತ್ತದೆ. ನನಗೂ ಕಾನೂನು ಗೊತ್ತಿದೆ, ವಕೀಲರು ಇದ್ದಾರೆ. ಯುವತಿ ನನ್ನ ವಿರುದ್ದ ಹೇಳುತ್ತಾಳೆ ಎಂದು ನನಗೆ ಗೊತ್ತಿದೆ. ನಾನು ಬೆಂಗಳೂರಿನಲ್ಲೇ ಇರುತ್ತೇನೆ, ಪೊಲೀಸರು ನನ್ನನ್ನೂ ವಿಚಾರಣೆ ಮಾಡಬೇಕು. ನಾಳೆಯಿಂದ ನಮ್ಮ ಆಟ ಶುರು” ಎಂದು ರಮೇಶ್ ಜಾರಕಿಹೊಳಿ  ತಿಳಿಸಿದರು.

Key words: Ramesh jarakiholi-cd case- our game -tomorrow.

website developers in mysore