ಬೆಂಗಳೂರು,ಸೆಪ್ಟಂಬರ್,25,2026 (www.justkannada.in): ರಾಜ್ಯದಲ್ಲಿ ಭೀಕರ ಬರ ವಿಚಾರ ಮತ್ತು ಕಸ್ತೂರಿ ರಂಗನ್ ವರದಿಗೆ ಸಂಬಂಧಿಸಿದಂತೆ ವಿಶೇಷ ಅಧಿವೇಶನದಲ್ಲಿ ಚರ್ಚೆಯಾಗಿದ್ದು ಈ ಸಂಬಂಧ ಕೇಂದ್ರ ಸರ್ಕಾರದ ಬಳಿಗೆ ಸರ್ವಪಕ್ಷ ನಿಯೋಗ ಕರೆದೊಯ್ಯಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ.
ಈ ಕುರಿತು ಮಾತನಾಡಿರುವ ಡಿಸಿಎಂ ಡಾ.ಜಿ.ಪರಮೇಶ್ವರ್, ಸರ್ವಪಕ್ಷ ಕರೆದೊಯ್ಯಲು ತೀರ್ಮಾನ ಮಾಡಲಾಗಿದೆ. ಈಗಾಗಲೇ ಸದನದಲ್ಲಿ ಹೇಳಿದ್ದೇವೆ. ಪ್ರಧಾನಿ, ಕೇಂದ್ರಗೃಹ ಸಚವ ಕೃಷಿ ಸಚಿವರನ್ನ ಭೇಟಿಯಾಗುತ್ತೇವೆ.
ವಿಪಕ್ಷ ಬರಲು ತಯಾರಿದ್ದರೆ ಸರ್ವಪಕ್ಷ ನಿಯೋಗ ಕರೆದುಕೊಂಡು ಹೋಗುತ್ತೇವೆ. ಇನ್ನೂ ದಿನಾಂಕ ಫಿಕ್ಸ್ ಆಗಿಲ್ಲ ಎಂದು ಪರಮೇಶ್ವರ್ ತಿಳಿಸಿದರು.







